ಆರೆಸ್ಸೆಸ್ ಅನ್ನು “ಮೂಲ-ಫ್ಯಾಶಿಸ್ಟ್” ಎಂದು ಕರೆದ ಉಪನ್ಯಾಸಕನನ್ನು ಅಮಾನತುಗೊಳಿಸಿದ ವಿಶ್ವವಿದ್ಯಾನಿಲಯ

Prasthutha|

ಕೊಚ್ಚಿನ್: ಆರೆಸ್ಸೆಸ್ ಅನ್ನು “ಮೂಲ-ಫ್ಯಾಶಿಸ್ಟ್”ಎಂದು ಕರೆದ ಕೇರಳದ ಉಪನ್ಯಾಸಕರೊಬ್ಬರನ್ನು ಕೇರಳದ ಕೇಂದ್ರೀಯ ವಿಶ್ವವಿದ್ಯಾಲಯವೊಂದು ಕೆಲಸದಿಂದ ಅಮಾನತುಗೊಳಿಸಿರುವ ಘಟನೆ ನಡೆದಿದೆ.

- Advertisement -

ಆನ್ ಲೈನ್ ಉಪನ್ಯಾಸ ನೀಡುತ್ತಿದ್ದ ಸಂದರ್ಭದಲ್ಲಿ ಉಪನ್ಯಾಸಕ ಸೆಬಾಸ್ಟಿಯನ್ ಅವರು ಜನರಲ್ ಫ್ರಾಂಕೊ ನೇತೃತ್ವದ ಸ್ಪೈನ್, ಸಲಾಜರ್ ನೇತೃತ್ವದ ಪೋರ್ಚುಗಲ್, ಜುವಾನ್ ಪೆರೋನ್ ನೇತೃತ್ವದ ಅರ್ಜೆಂಟೀನಾ, ಪಿನೋಚೆ ನೇತೃತ್ವದ ಚಿಲಿ, ದಕ್ಷಿಣ ಆಫ್ರಿಕಾದ ವರ್ಣಭೇದ ನೀತಿ, 1990ರ ಆರಂಭದಲ್ಲಿ ರುವಾಂಡದ ಹುಟು ಅಲ್ಟ್ರಾ ನ್ಯಾಷನಲಿಸ್ಟ್ ಮತ್ತು ಸರ್ವೋಚ್ಚವಾದಿ ಚಳುವಳಿಯನ್ನು ಮೂಲ- ಫ್ಯಾಶಿಸ್ಟ್ ಎಂದು ಪರಿಗಣಿಸಬಹುದು. ಅದೇ ರೀತಿ 2014ರಲ್ಲಿ ಅಧಿಕಾರಕ್ಕೇರಿದ ಮೋದಿ ನೇತೃತ್ವದ ಭಾರತವನ್ನು ಮೂಲ- ಫ್ಯಾಶಿಸ್ಟ್ ಗೆ ಪಟ್ಟಿಗೆ ಸೇರಿಸಬಹುದು ಎಂದು ವಿವರಿಸಿದ್ದರು.

ಈ ಹಿನ್ನೆಲೆಯಲ್ಲಿ ಆರೆಸ್ಸೆಸ್ ನ ವಿದ್ಯಾರ್ಥಿ ಸಂಘಟನೆಯಾದ ಎ.ಬಿವಿ.ಪಿ ಕಾರ್ಯಕರ್ತರು ವಿಶ್ವವಿದ್ಯಾಲಯವು ಪ್ರಾಧ್ಯಾಪಕರ ವಿರುದ್ಧ ಯಾವುದೇ ಕ್ರಮ ಜರುಗಿಸದಿದ್ದರೆ ಉಗ್ರ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಸಿದ್ದರು.

- Advertisement -

ಈ ನಿಟ್ಟಿನಲ್ಲಿ ಅಧ್ಯಾಪಕರು, ಉದ್ಯೋಗಿಗಳು ಯಾವುದೇ ರೀತಿಯ ಪ್ರಚೋದನಕಾರಿ ಉಪನ್ಯಾಸ/ಹೇಳಿಕೆಗಳನ್ನು ನೀಡುವುದು ರಾಷ್ಟ್ರವಿರೋಧಿ ಮತ್ತು ರಾಷ್ಟ್ರದ ಹಿಸಾಸಕ್ತಿಗೆ ವಿರುದ್ಧವಾಗಿದೆ. ಈ ನಿಟ್ಟಿನಲ್ಲಿ ಭವಿಷ್ಯದಲ್ಲಿ ಇಂತಹ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವವರ ವಿರುದ್ಧ ಕಠಿಣ ಶಿಸ್ತು ಕ್ರಮ ಕೈಗೊಳ್ಳಲಾಗುವುದೆಂದು ವಿಶ್ವವಿದ್ಯಾನಿಲಯ ಹೊರಡಿಸಿದ ಸುತ್ತೋಲೆಯಲ್ಲಿ ತಿಳಿಸಿದೆ.

ಈ ಮಧ್ಯೆ ವಿದ್ಯಾರ್ಥಿಗಳಾದ ಫೆಟರ್ನಿಟಿ ಚಳುವಳಿ, ಸ್ಟೂಡೆಂಟ್ಸ್ ಫೆಡೆರೇಶನ್ ಆಫ್ ಇಂಡಿಯಾ ಮತ್ತು ಕೇರಳ ಸ್ಟೂಡೆಂಟ್ ಯೂನಿಯನ್ ಉಪನ್ಯಾಸಕರಾದ ಸೆಬಾಸ್ಟಿಯನ್ ಅವರನ್ನು ಬೆಂಬಲಿಸಿದೆ. ವಿವಾದ ಹೆಚ್ಚಾಗುತ್ತಿದ್ದಂತೆ ವಿಶ್ವವಿದ್ಯಾನಿಲಯವು ಸೆಬಾಸ್ಟಿಯನ್ ಅವರನ್ನು ಸೇವೆಯಿಂದ ಅಮಾನತುಗೊಳಿಸಿತು.



Join Whatsapp