PSI ದೈಹಿಕ ಪರೀಕ್ಷೆಯಲ್ಲೂ ಅಕ್ರಮ: ಪ್ರಿಯಾಂಕ್ ಖರ್ಗೆ

Prasthutha|


ಕಲಬುರಗಿ: ಪಿಎಸ್ ಐ ದೈಹಿಕ ಪರೀಕ್ಷೆಯಲ್ಲೂ ಅಕ್ರಮ ನಡೆದಿದೆ ಎಂದು‌ ಶಾಸಕ ಪ್ರಿಯಾಂಕ್ ಖರ್ಗೆ ಆರೋಪಿಸಿದ್ದಾರೆ.

- Advertisement -

ಪಿಎಸ್ ಐ ನೇಮಕಾತಿ ಅಕ್ರಮ ಪ್ರಕರಣದ ತನಿಖೆ ಚುರುಕುಗೊಂಡಿದೆ. ಈಗಾಗಲೇ ಸರ್ಕಾರ ಮರು ಪರೀಕ್ಷೆ ನಡೆಸುವುದಾಗಿಯೂ ತಿಳಿಸಿದೆ. ಆದರೆ ಈ ಮರು ಪರೀಕ್ಷೆ ಪೇಪರ್ ಒಂದಕ್ಕೋ, ಪೇಪರ್ ಎರಡಕ್ಕೋ ಅಥವಾ ಫಿಜಿಕಲ್​ ಗೂ ಇದೆಯೇ? ಎಂದು ಪ್ರಿಯಾಂಕ್​ ಖರ್ಗೆ ಕೇಳಿದ್ದಾರೆ.

ಈ ಬಗ್ಗೆ ನಾನು ಎರಡು ದಿನಗಳ ಹಿಂದೆಯೇ ಕೇಳಿದ್ದೆ. ಈ ಹಿಂದೆಯೂ ನೇಮಕಾತಿಗಳಲ್ಲಿ ಅಕ್ರಮ ನಡೆದಿದೆ ಎಂದು ಕೆಲ ಅಭ್ಯರ್ಥಿಗಳು ಹೇಳಿದ್ದಾರೆ. ಪ್ರಿಯಾಂಕ್​ ಹಿಟ್ ಆ್ಯಂಡ್ ರನ್ ಮಾಡ್ತಿದ್ದಾರೆಂದು ಬಿಜೆಪಿಯವರು ಹೇಳಿದ್ದಾರೆ. ಆದರೆ ದೈಹಿಕ ಪರೀಕ್ಷೆಯಲ್ಲೂ ಅಕ್ರಮ ನಡೆದಿದೆ ಎಂದು ಅವರು ಆರೋಪಿಸಿದರು.

Join Whatsapp