10,000 ಮೀಟರ್ ನಡಿಗೆ | ಬೆಳ್ಳಿ ಗೆದ್ದು ಇತಿಹಾಸ ಸೃಷ್ಟಿಸಿದ ಭಾರತದ ಪ್ರಿಯಾಂಕಾ ಗೋಸ್ವಾಮಿ

Prasthutha|

ಕಾಮನ್​ವೆಲ್ತ್ ಗೇಮ್ಸ್​ನಲ್ಲಿ ಭಾರತದ ಕ್ರೀಡಾಪಟುಗಳ ಪದಕಗಳ ಬೇಟೆ ಮುಂದುವರೆದಿದೆ. ಶನಿವಾರ ನಡೆದ 10,000 ಮೀಟರ್ ನಡಿಗೆಯಲ್ಲಿ ಎಲ್ಲರ ನಿರೀಕ್ಷೆಯನ್ನು ಮೀರಿದ ಯಶಸ್ಸು ಸಾಧಿಸಿದ ಭಾರತದ ಪ್ರಿಯಾಂಕಾ ಗೋಸ್ವಾಮಿ, ಬೆಳ್ಳಿ ಪದಕ ಗೆದ್ದು ಸಂಭ್ರಮಿಸಿದ್ದಾರೆ. ಈ ಬಾರಿಯ ಕಾಮನ್‌ವೆಲ್ತ್‌ ಕೂಟದ ಟ್ರ್ಯಾಕ್‌ & ಫೀಲ್ಡ್‌ ವಿಭಾಗದಲ್ಲಿ ಭಾರತಕ್ಕೆ ಲಭಿಸುತ್ತಿರುವ ಮೂರನೇ ಪದಕ ಇದಾಗಿದೆ. ಲಾಂಗ್​ಜಂಪ್​ನಲ್ಲಿ ಮುರಳಿ ಶ್ರೀಶಂಕರ್ (ಬೆಳ್ಳಿ) ಮತ್ತು ಹೈಜಂಪ್‌ ವಿಭಾಗದಲ್ಲಿ ತೇಜಸ್ವಿನ್ ಶಂಕರ್ (ಕಂಚು)​ ಈಗಾಗಲೇ ಪದಕ ಗೆದ್ದಿದ್ದಾರೆ.

- Advertisement -

10,000 ಮೀಟರ್ ನಡಿಗೆಯನ್ನು ಪೂರ್ಣಗೊಳಿಸಲು ಪ್ರಿಯಾಂಕಾ, 49 ನಿಮಿಷ, 38 ಸೆಕೆಂಡ್​​​ ಸಮಯ ತೆಗೆದುಕೊಂಡರು. ಇದು ಅವರ ವೈಯಕ್ತಿಕ ಶ್ರೇಷ್ಠ ಸಮಯ ನಿರ್ವಹಣೆಯಾಗಿದೆ. ಜೊತೆಗೆ ಕಾಮನ್‌ವೆಲ್ತ್ ಗೇಮ್ಸ್‌ನ ನಡಿಗೆ ವಿಭಾಗದಲ್ಲಿ ಪದಕ ಗೆದ್ದ ಮೊದಲ ಭಾರತೀಯ ಮಹಿಳಾ ಆಟಗಾರ್ತಿ ಎಂಬ ಹೆಗ್ಗಳಿಕೆಯೂ ಪ್ರಿಯಾಂಕಾ ಅವರದ್ದಾಯಿತು. ಮಹಿಳೆಯರ 20 ಕಿಮೀ ನಡಿಗೆಯಲ್ಲಿ ಪ್ರಿಯಾಂಕಾ ರಾಷ್ಟ್ರೀಯ ದಾಖಲೆಯನ್ನು ಹೊಂದಿದ್ದಾರೆ.

ಬರ್ಮಿಂಗ್‌ಹ್ಯಾಮ್‌ನಲ್ಲಿ ನಡಿಗೆ ಸ್ಪರ್ಧೆಯ ಆರಂಭದಿಂದ ನಾಲ್ಕು ಕಿಲೋಮೀಟರ್‌ವರೆಗೂ ಪ್ರಿಯಾಂಕಾ ಮುನ್ನಡೆ ಕಾಯ್ದುಕೊಂಡಿದ್ದರು. ಆದರೆ ಆ ಬಳಿಕ ಆಸ್ಟ್ರೇಲಿಯಾದ ಜೆಮಿಮಾ ಮೊಂಟಾಗ್ ಮತ್ತು ಕೀನ್ಯಾದ ಎಮಿಲಿ ವಾಮುಸಿ, ಮೊದಲ ಎರಡು ಸ್ಥಾನಗಳಲ್ಲಿ ಕಾಣಿಸಿಕೊಂಡರು. 8 ಕಿಲೋಮೀಟರ್‌ ದೂರ ಕ್ರಮಿಸಿದ ಬಳಿಕವೂ ಭಾರತದ ಸ್ಪರ್ಧಿ ಮೂರನೇ ಸ್ಥಾನದಲ್ಲಿ ಕಾಣಿಸಿಕೊಂಡಿದ್ದರು. ಆದರೆ ಅಂತಿಮ 2 ಕಿಮೀ ನಡಿಗೆಯಲ್ಲಿ ತಮ್ಮ ವೇಗವನ್ನು ಹೆಚ್ಚಿಸಿದ 26 ವರ್ಷದ ಪ್ರಿಯಾಂಕಾ, ಎಮಿಲಿ ವಾಮುಸಿಯನ್ನು ಹಿಂದಿಕ್ಕಿದರು. 42 ನಿಮಿಷ, 38 ಸೆಕೆಂಡ್‌ಗಳಲ್ಲಿ ಸ್ಪರ್ಧೆ ಮುಗಿಸಿದ ಆಸ್ಟ್ರೇಲಿಯಾದ ಜೆಮಿಮಾ ಮೊಂಟಾಗ್, ಚಿನ್ನದ ಪದಕಕ್ಕೆ ಕೊರೊಳೊಡ್ಡಿದರು. ಕಣದಲ್ಲಿದ್ದ ಭಾರತದ ಮತ್ತೊಬ್ಬ ಸ್ಪರ್ಧಿ ಭಾವನಾ ಜಾಟ್ 8ನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡರು.

Join Whatsapp