ಪ್ರವಾಹ ಪರಿಹಾರ ಅನುದಾನದಲ್ಲಿ ಕೊಡಗನ್ನು ಕಡೆಗಣಿಸಿದ ಸರಕಾರ: ಬಿಜೆಪಿಯನ್ನು ಆಯ್ಕೆ ಮಾಡಿರುವುದಕ್ಕೆ ಕೊಡಗಿಗೆ ಕೊಟ್ಟ ಕೊಡುಗೆ: SDPI

Prasthutha|

ಮಡಿಕೇರಿ: ಪ್ರವಾಹ ಪರಿಹಾರ ಕೈಗೊಳ್ಳಲು ರಾಜ್ಯದ ವಿವಿಧ ಜಿಲ್ಲೆಗಳಿಗೆ ರಾಜ್ಯ ಸರ್ಕಾರ 200 ಕೋಟಿ ರೂ. ಅನುದಾನ ಬಿಡುಗಡೆ ಮಾಡಿದೆ. ಆದರೆ ಅತ್ಯಧಿಕ ಮಳೆಯಾಗುತ್ತಿರುವ ಹಾಗೂ ಅಪಾರ ಪ್ರಮಾಣದ ನಾಶ ನಷ್ಟ ಅನುಭವಿಸುತ್ತಿರುವ ಕೊಡಗು ಜಿಲ್ಲೆಗೆ ಯಾವುದೇ ಅನುದಾನ ನೀಡದೆ ಕಡೆಗಣಿಸಿದೆ. ಜಿಲ್ಲೆಯ ಜನತೆ ಬಿಜೆಪಿಯನ್ನು ಆಯ್ಕೆ ಮಾಡಿರುವುದಕ್ಕೆ ರಾಜ್ಯ ಸರಕಾರ ಕೊಡಗಿಗೆ ಕೊಟ್ಟ ಕೊಡುಗೆಯಾಗಿದೆ ಎಂದು ಎಸ್.ಡಿ‌.ಪಿ.ಐ ಪಕ್ಷದ ಜಿಲ್ಲಾಧ್ಯಕ್ಷ ಕಲೀಲ್ ಮಡಿಕೇರಿ ಆರೋಪಿಸಿದ್ದಾರೆ.

- Advertisement -

ಜಿಲ್ಲೆಯ ಜನತೆ ಸತತವಾಗಿ ಬಿಜೆಪಿ ಪಕ್ಷದ ಸಂಸದರನ್ನು ಹಾಗೂ ಶಾಸಕರನ್ನು ಗೆಲ್ಲಿಸುತ್ತಿದ್ದು, ಇವರ ದೌರ್ಬಲ್ಯದ ಫಲವಾಗಿ ಸರಕಾರ ಕೊಡಗನ್ನು ಕಡೆಗಣಿಸುತಾ ಬಂದಿದೆ. ಪರಿಹಾರ ಹಾಗೂ ಅಭಿವೃದ್ಧಿ ಬಗ್ಗೆ ಕಿಂಚಿತ್ತೂ ಕಾಳಜಿ ವಹಿಸದ ಭಾರತೀಯ ಜನತಾ ಪಕ್ಷ ಕೇವಲ ಭಾವನಾತ್ಮಕ ವಿಚಾರಗಳಲ್ಲಿಯೇ ರಾಜಕೀಯ ಮಾಡುತ್ತಿದ್ದಾರೆ. ಇದರ ಬಗ್ಗೆ ಜಿಲ್ಲೆಯ ಜನತೆ ಎಚ್ಚೆತ್ತುಕೊಳ್ಳಬೇಕಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Join Whatsapp