ಸಿಖ್ ಉಗ್ರವಾದ ಪುನಶ್ಚೇತನದ ಉದ್ದೇಶ | ಸಿಪ್ರಸ್ ನಿಂದ ದೆಹಲಿಗೆ ಬಂದ ಗುರ್ಜೀತ್ ಸಿಂಗ್ ನಿಜ್ಜರ್ ಬಂಧನ

Prasthutha|

ನವದೆಹಲಿ : ಸಿಪ್ರಸ್ ನಲ್ಲಿ ತಲೆ ಮರೆಸಿಕೊಂಡಿದ್ದನೆನ್ನಲಾದ ಖಲಿಸ್ತಾನಿ ಭಯೋತ್ಪಾದಕ ಚಟುವಟಿಕೆಗಳ ನಿರ್ವಾಹಕನೆನ್ನಲಾದ ಗುರ್ಜೀತ್ ಸಿಂಗ್ ನಿಜ್ಜರ್ ಎಂಬಾತನನ್ನು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ ಐಎ) ದೆಹಲಿ ವಿಮಾನ ನಿಲ್ದಾಣದಲ್ಲಿ ಬಂಧಿಸಿದೆ. 2018ರ ಡಿಸೆಂಬರ್ ನಲ್ಲಿ ಬಂಧಿತನಾಗಿದ್ದ ಪುಣೆ ನಿವಾಸಿ, ‘ಖಲಿಸ್ತಾನಿ ಪ್ರತ್ಯೇಕತಾವಾದಿ’ಯೊಬ್ಬನ ಪ್ರಕರಣಕ್ಕೆ ಸಂಬಂಧಿಸಿ ನಿಜ್ಜರ್ ನನ್ನು ಬಂಧಿಸಲಾಗಿದೆ ಎಂದು ವರದಿಗಳು ತಿಳಿಸಿವೆ.

- Advertisement -

ಸಿಖ್ ಯುವಕರನ್ನು ಸಾಮಾಜಿಕ ಜಾಲತಾಣಗಳಲ್ಲಿ ಉತ್ತೇಜಿಸುವ ಮೂಲಕ, ಸಿಖ್ ಉಗ್ರವಾದಕ್ಕೆ ಪುನಶ್ಚೇತನ ನೀಡುವ ಉದ್ದೇಶ ನಿಜ್ಜರ್ ಹೊಂದಿದ್ದಾನೆ ಎಂದು ಆಪಾದಿಸಲಾಗಿದೆ.

ತಲೆ ಮರೆಸಿಕೊಂಡಿದ್ದ ಗುರ್ಜೀತ್ ಸಿಂಗ್ ನಿಜ್ಜರ್ ಈ ಪ್ರಕರಣದಲ್ಲಿ ಪ್ರಮುಖ ಆರೋಪಿ ಎಂಬುದು ತನಿಖೆಯಿಂದ ಗೊತ್ತಾಗಿದೆ. ಆರೋಪಿಗಳಾದ ನಿಜ್ಜರ್, ಹರ್ಪಲ್ ಸಿಂಗ್, ಮೊಯಿನ್ ಖಾನ್ ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯರಾಗಿದ್ದಾರೆ ಮತ್ತು ಸಿಖ್ ಉಗ್ರವಾದಕ್ಕೆ ಪುನಶ್ಚೇತನ ನೀಡಲು ಕ್ರಿಮಿನಲ್ ಸಂಚು ರೂಪಿಸಿದ್ದಾರೆ. ಪ್ರತ್ಯೇಕ ಖಲಿಸ್ತಾನ್ ಹೊಂದುವ ಗುರಿ ಅವರು ಹೊಂದಿದ್ದಾರೆ ಎಂದು ನಿಜ್ಜರ್ ಬಂಧನಕ್ಕೆ ಸಂಬಂಧಿಸಿ ಎನ್ ಐಎ ಬಿಡುಗಡೆಗೊಳಿಸಿರುವ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಲಾಗಿದೆ.

Join Whatsapp