ನ್ಯೂಝಿಲ್ಯಾಂಡ್ ಸರಕಾರದ ಸಚಿವೆಯಾಗಿ ಭಾರತೀಯ ಮೂಲದ ಪ್ರಿಯಾಂಕಾ ರಾಧಾಕೃಷ್ಣನ್ ನೇಮಕ

Prasthutha|

ವೆಲ್ಲಿಂಗ್ಟನ್ : ನ್ಯೂಝಿಲ್ಯಾಂಡ್ ಪ್ರಧಾನಿ ಜೆಸಿಂಡಾ ಆರ್ಡೆನ್ ಭಾರತೀಯ ಮೂಲದ ಪ್ರಿಯಾಂಕಾ ರಾಧಾಕೃಷ್ಣನ್ ಅವರನ್ನು ತಮ್ಮ ಸಚಿವ ಸಂಪುಟದಲ್ಲಿ ಸೇರಿಸಿಕೊಂಡಿದ್ದಾರೆ. ಇದೇ ಮೊದಲ ಬಾರಿಗೆ ಭಾರತ ಮೂಲದ ವ್ಯಕ್ತಿ ನ್ಯೂಝಿಲ್ಯಾಂಡ್ ಸರಕಾರದಲ್ಲಿ ಸಚಿವ ಸ್ಥಾನವನ್ನು ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.

ಜೆಸಿಂಡಾ ಆರ್ಡೆನ್ ಐವರು ಹೊಸ ಸಚಿವರನ್ನು ನಿಯೋಜಿಸಿದ್ದು, ಅವರಲ್ಲಿ ಪ್ರಿಯಾಂಕಾ ಕೂಡ ಒಬ್ಬರು. 41ರ ಹರೆಯದ ಪ್ರಿಯಾಂಕಾ ನ್ಯೂಝಿಲ್ಯಾಂಡ್ ನ ಆಡಳಿತಾರೂಢ ಲೇಬರ್ ಪಾರ್ಟಿಯ ಮುಖಂಡೆಯಾಗಿದ್ದಾರೆ.

- Advertisement -

ಇಂದು ನನ್ನ ಜೀವನದಲ್ಲಿ ಮಹತ್ವದ ದಿನ. ತಮ್ಮ ಸರಕಾರದಲ್ಲಿ ಸಚಿವೆಯಾದ ಬಳಿಕ, ಹಲವು ವಿಚಾರಗಳು ಮನಸಿಗೆ ಬಂದಿವೆ ಎಂದು ಪ್ರಿಯಾಂಕಾ ಹೇಳಿದ್ದಾರೆ.

ಪ್ರಿಯಾಂಕಾ ಚೆನ್ನೈನಲ್ಲಿ ಜನಿಸಿದವರು. ಅವರ ಹೆತ್ತವರು ಕೇರಳದ ಪರವೂರ್ ನವರಾಗಿದ್ದಾರೆ. ಪ್ರಿಯಾಂಕಾ ತನ್ನ ಶಿಕ್ಷಣವನ್ನು ಸಿಂಗಾಪುರದಲ್ಲಿ ಪಡೆದಿದ್ದರು ಮತ್ತು ಉನ್ನತ ಶಿಕ್ಷಣಕ್ಕಾಗಿ ನ್ಯೂಝಿಲ್ಯಾಂಡ್ ಗೆ ತೆರಳಿದ್ದರು. ಅಲ್ಲಿ ಅವರು ವಲಸಿಗ ಕಾರ್ಮಿಕರು ಮತ್ತು ಮಹಿಳೆಯರ ಪರವಾದ ಹೋರಾಟಗಳ ಮೂಲಕ ರಾಜಕೀಯದಲ್ಲಿ ಗುರುತಿಸಿಕೊಂಡಿದ್ದರು. ಬಳಿಕ ಲೇಬರ್ ಪಾರ್ಟಿಯಲ್ಲಿ ನಾಯಕಿಯಾಗಿ ಹೊರಹೊಮ್ಮಿದ್ದರು.  

ನ್ಯೂಝಿಲ್ಯಾಂಡ್ ಸರಕಾರದಲ್ಲಿ ಸಚಿವೆಯಾಗಿ ಆಯ್ಕೆಯಾದ ಪ್ರಿಯಾಂಕಾರನ್ನು ಕೇರಳ ಆರೋಗ್ಯ ಸಚಿವೆ ಕೆ.ಕೆ. ಶೈಲಜಾ ಅಭಿನಂದಿಸಿದ್ದಾರೆ.

- Advertisement -