ದೆಹಲಿ ಗಲಭೆಯ ಮಾಹಿತಿಯಿದ್ದವರು ತಮಗೆ ಕೊಡುವಂತೆ ಮಾಜಿ ನ್ಯಾಯಮೂರ್ತಿಗಳು, ಅಧಿಕಾರಿಗಳ ಸಮಿತಿಯ ಕರೆ

Prasthutha|

ನವದೆಹಲಿ : ಕಳೆದ ಫೆಬ್ರವರಿಯಲ್ಲಿ ನಡೆದ ಮುಸ್ಲಿಂ ವಿರೋಧಿ ಗಲಭೆಗೆ ಸಂಬಂಧಿಸಿದ ವಿವರಗಳಿದ್ದರೆ ಕಳುಹಿಸಿಕೊಡುವಂತೆ ಜನತೆಗೆ ನಿವೃತ್ತ ನ್ಯಾಯಮೂರ್ತಿಗಳು, ಅಧಿಕಾರಿಗಳು ಸೇರಿದಂತೆ ಹಲವು ಪ್ರಮುಖರು ಇರುವ ಸಮಿತಿಯೊಂದು ಮನವಿ ಮಾಡಿದೆ. ಗಲಭೆಗೆ ಸಂಬಂಧಿಸಿ ಸತ್ಯಶೋಧನೆಗಾಗಿ ಈ ಸಮಿತಿ ರಚಿಸಲಾಗಿದೆ.

ಕಳುಹಿಸಿದ ಮಾಹಿತಿ ಆಧಾರದಲ್ಲಿ ಕೆಲವು ವ್ಯಕ್ತಿಗಳನ್ನು ಕರೆಸಿ ಸಮಿತಿಯು ಮಾತುಕತೆ ಮಾಡಬಹುದು. ಮಾಹಿತಿದಾರರ ಪರಿಚಯ ಗುಪ್ತವಾಗಿ ಇಡಲಾಗುವುದು. ವಿವರಗಳನ್ನು ಕಳುಹಿಸಲು ಕೊನೆಯ ದಿನಾಂಕ ನ.30 ಆಗಿದೆ.

- Advertisement -

ಕಾನ್ಸ್ ಟಿಟ್ಯೂಶನಲ್ ಕಾಂಡಕ್ಟ್ ಗ್ರೂಪ್ (ಸಿಸಿಜಿ)ಯು ದೆಹಲಿ ಗಲಭೆಗೆ ಸಂಬಂಧಿಸಿದ ಸತ್ಯಶೋಧನೆಗೆ ಈ ಸಮಿತಿ ರಚಿಸಿದೆ. ಈ ಸಮಿತಿಯಲ್ಲಿ ಸುಪ್ರೀಂ ಕೋರ್ಟ್ ನ ನಿವೃತ್ತ ನ್ಯಾಯಮೂರ್ತಿ ಮದನ್ ಲೋಕುರ್, ದೆಹಲಿ ಮತ್ತು ಮದ್ರಾಸ್ ಹೈಕೋರ್ಟ್ ನ ಮುಖ್ಯ ನ್ಯಾಯಮೂರ್ತಿ ಎ.ಪಿ. ಶಾ, ದೆಹಲಿ ಹೈಕೋರ್ಟ್ ನ ಮಾಜಿ ನ್ಯಾಯಮೂರ್ತಿ ಆರ್.ಎಸ್. ಸೋಧಿ, ಪಾಟ್ನಾ ಹೈಕೋರ್ಟ್ ಮಾಜಿ ನ್ಯಾಯಮೂರ್ತಿ ಅಂಜನಾ ಪ್ರಕಾಶ್, ಮಾಜಿ ಕೇಂದ್ರ ಗೃಹ ಕಾರ್ಯದರ್ಶಿ ಜಿ.ಕೆ. ಪಿಳ್ಳೈ ಮುಂತಾದ ಪ್ರಮುಖರು ಇದ್ದಾರೆ.

Constitutional Conduct Group (CCG), Common Cause House, 2nd Floor, Nelson Mandela Marg, Vasant Kunj, New Delhi – 110070 ಈ ವಿಳಾಸಕ್ಕೆ ಮಾಹಿತಿ ಕಳುಹಿಸಿಕೊಡುವವರು ಕಳುಹಿಸಬಹುದು.

- Advertisement -