ಹೋಂ ಸ್ಟೇ ಗೆ ಆಗಮಿಸುವವರ ಖಾಸಗಿ ದೃಶ್ಯಗಳನ್ನು ಸೆರೆಹಿಡಿದು ಬ್ಲ್ಯಾಕ್ ಮೇಲ್; ನಾಲ್ವರು ವಶಕ್ಕೆ

Prasthutha|

ಚಿಕ್ಕಮಗಳೂರು : ಹೋಂ ಸ್ಟೇ ಗೆ ಆಗಮಿಸುವ ಯುವಕ ಯುವತಿಯರ ಖಾಸಗಿ ದೃಶ್ಯಗಳನ್ನು ಸೆರೆಹಿಡಿದು ಅವರ ಬಳಿ ಲಕ್ಷಾಂತರ ರೂಪಾಯಿ ಹಣಕ್ಕೆ ಬೇಡಿಕೆಯಿಡುತ್ತಿದ್ದ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ.

- Advertisement -


ಹೋಂ ಸ್ಟೇ ಗೆ ಯುವತಿಯೊಂದಿಗೆ ಬಂದ ಸಾಫ್ಟ್ ವೇರ್ ಇಂಜಿನಿಯರ್ ಓರ್ವನನ್ನು ಬ್ಲಾಕ್ ಮೇಲ್ ಮಾಡಿ ಆತನಿಂದ 15 ಲಕ್ಷ ಹಣವನ್ನು ಬೇಡಿಕೆಯಿಟ್ಟಿದ ಗ್ಯಾಂಗ್ ಗೆ ಮೊದಲು ಯುವಕ ಒಂದು ಲಕ್ಷದ ಇಪ್ಪತ್ತು ಸಾವಿರ ರೂಪಾಯಿ ಹಣವನ್ನು ನೀಡಿದ್ದ. ಹೆಚ್ಚಿನ ಹಣಕ್ಕೆ ಆರೋಪಿಗಳು ಡಿಮ್ಯಾಂಡ್ ಮಾಡಿದಾಗ ಯುವಕ ಪೊಲೀಸರಿಗೆ ದೂರು ನೀಡಿದ್ದಾನೆ.


ಯುವಕ ಯುವತಿಯರು ಇರುವ ವೇಳೆ ಇದ್ದಕ್ಕಿದ್ದಂತೆ ರೂಂ ಗೆ ನುಗ್ಗುವ ನಾಲ್ವರು, ನಿಮ್ಮ ದೃಶ್ಯಾವಳಿಗಳು ನಮ್ಮ ಕೈಯಲ್ಲಿದ್ದು, ಬೇಡಿಕೆ ಇಟ್ಟಷ್ಟು ಹಣ ನೀಡದೇ ಇದ್ದಲ್ಲಿ ದೃಶ್ಯಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಾಕುವುದಾಗಿ ಬೆದರಿಕೆ ಒಡ್ಡುತ್ತಿದ್ದರು ಎನ್ನಲಾಗಿದೆ.

- Advertisement -


ಪೊಲೀಸರು ಹುಬ್ಬಳ್ಳಿ ಮೂಲದ ಶಿವರಾಜಚಂದ್ರ, ದಾವಣಗೆರೆ ಮೂಲದ ರಮ್ಯ ಅಲಿಯಾಸ್ ಭೂಮಿಕ, ಪವಿತ್ರಾ, ಹಾಗೂ ಚಿಕ್ಕಮಗಳೂರು ಮೂಲದ ಸುರೇಶ್ ಎಂಬ ನಾಲ್ವರು ಆರೋಪಿಗಳನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.

ಇನ್ನೂ ನಾಲ್ವರಿಗಾಗಿ ಪೊಲೀಸರು ಬಲೆ ಬೀಸಿದ್ದು ಈ ಜಾಲದ ಹಿಂದಿರುವ ಆರೋಪಿಗಳ ಹೆಡೆಮುರಿಕಟ್ಟಿ ಇಂತಹ ಕೃತ್ಯಗಳಿಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.



Join Whatsapp