ವಿದ್ಯಾರ್ಥಿನಿಯರ ಖಾಸಗಿ ದೃಶ್ಯಗಳು ಲೀಕ್;  ಸಂತ್ರಸ್ತ ವಿದ್ಯಾರ್ಥಿನಿಯರಿಂದ ಆತ್ಮಹತ್ಯೆಗೆ ಯತ್ನ, ಭುಗಿಲೆದ್ದ ಆಕ್ರೋಶ

Prasthutha|

ಚಂಢೀಗಡ: ವಿದ್ಯಾರ್ಥಿನಿಯರ ಶೌಚಾಲಯದ ಖಾಸಗಿ ದೃಶ್ಯಗಳನ್ನು ಸೆರೆಹಿಡಿದು ವೈರಲ್ ಮಾಡಲಾಗಿದೆಯೆಂದು ಆರೋಪಿಸಿ ಚಂಢೀಗಡ ವಿಶ್ವ ವಿದ್ಯಾಲಯದಲ್ಲಿ ಪ್ರತಿಭಟನೆ ಭುಗಿಲೆದ್ದಿದ್ದು, ಅರ್ಧರಾತ್ರಿ ಪ್ರಾರಂಭಗೊಂಡ ಪ್ರತಿಭಟನೆ ಮುಂದುವರಿದಿದೆ.

- Advertisement -

ವಿದ್ಯಾರ್ಥಿನಿಯರ ಖಾಸಗೀ ದೃಶ್ಯಗಳನ್ನು ಸೆರೆಹಿಡಿದ ವಿದ್ಯಾರ್ಥಿನಿಯು ಅದನ್ನು ತನ್ನ ಗೆಳೆಯನಿಗೆ ಕಳುಹಿಸಿ ಕೊಟ್ಟಿದ್ದಳು. ಪ್ರಕರಣ ಸಂಬಂಧ ಪ್ರಥಮ ವರ್ಷದ ವಿದ್ಯಾರ್ಥಿಯೋರ್ವಳನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಪಂಚಾಬ್‌ನ ಚಂಢೀಗಡ ವಿಶ್ವ ವಿದ್ಯಾಲಯದ ಸುಮಾರು 60ರಷ್ಟು ವಿದ್ಯಾರ್ಥಿನಿಯರ ಶೌಚಾಲಯದ ಖಾಸಗಿ ದೃಶ್ಯಗಳನ್ನು ಅದೇ ಕ್ಯಾಂಪಸ್‌ನ ವಿದ್ಯಾರ್ಥಿನಿ ಸೆರೆ ಹಿಡಿದಿದ್ದು, ಬಳಿಕ ಶಿಮ್ಲಾದಲ್ಲಿರುವ ತನ್ನ ಗೆಳೆಯನಿಗೆ ಕಳುಹಿಸಿ ಕೊಟ್ಟಿದ್ದಳು. ಆತ ಅದನ್ನು ಆನ್‌ಲೈನ್‌ನಲ್ಲಿ ಅಪ್‌ಲೋಡ್ ಮಾಡಿದ್ದ. ಈ ದೃಶ್ಯ ನೋಡಿದ ಸಂತ್ರಸ್ತ ವಿದ್ಯಾರ್ಥಿನಿಯರ ಪೈಕಿ 8 ಮಂದಿ ಆತ್ಮಹತ್ಯೆಗೆ ಯತ್ನಿಸಿದ್ದು, ಓರ್ವಳ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದು ಬಂದಿದೆ.

Join Whatsapp