ಖಾಸಗಿ ಸ್ಕೂಲ್ ಬಸ್ ಡಿಕ್ಕಿ: 2ನೇ ತರಗತಿ ವಿದ್ಯಾರ್ಥಿ ಮೃತ್ಯು

Prasthutha|

ಬೆಂಗಳೂರು: ಸ್ಕೂಲ್ ಬಸ್ ಡಿಕ್ಕಿ ಹೊಡೆದು ಶಾಲೆಗೆ ಹೋಗುತ್ತಿದ್ದ 2ನೇ ತರಗತಿ ವಿದ್ಯಾರ್ಥಿಯೊಬ್ಬ ಸಾವನ್ನಪ್ಪಿರುವ ಘಟನೆ ಎಚ್ ಎಎಲ್ ವಿಮಾನ ನಿಲ್ದಾಣದ ಮುನ್ನೇಕೊಳಾಲ ಮುಖ್ಯ ರಸ್ತೆಯಲ್ಲಿ ನಡೆದಿದೆ.

- Advertisement -

ಮುನ್ನೇಕೊಳಾಲದ ಪ್ರಕಾಶ್ ಹಾಗೂ ಪ್ರೀತು ದಂಪತಿಯ ಪುತ್ರ ನಿತೀಶ್ ಕುಮಾರ್ (7) ಮೃತಪಟ್ಟ ಬಾಲಕನಾಗಿದ್ದಾನೆ ಎಂದು ಡಿಸಿಪಿ ಕಲಾ ಕೃಷ್ಣಸ್ವಾಮಿ ತಿಳಿಸಿದ್ದಾರೆ.

ಮುನ್ನೇಕೊಳಾಲ ಮುಖ್ಯ ರಸ್ತೆಯ ಸರ್ಕಾರಿ ಶಾಲೆಯ ತಿರುವಿನಲ್ಲಿ ಅದೇ ಶಾಲೆಯಲ್ಲಿ ಓದುತ್ತಿದ್ದ ನಿತೀಶ್ ಕುಮಾರ್ ನಿನ್ನೆ ಬೆಳಿಗ್ಗೆ 9-5 ರ ವೇಳೆ ರಸ್ತೆಯ ಅಂಚಿನ ಎಡಭಾಗದಲ್ಲಿ ನಡೆದುಕೊಂಡು ಶಾಲೆ ಹೋಗುತ್ತಿದ್ದ. ಅದೇ ರಸ್ತೆಯಲ್ಲಿ ಗಾಂಧಿನಗರದ ಕಡೆಯಿಂದ ಮುನ್ನೇಕೊಳಾಲ ಗ್ರಾಮದ ಕಡೆಗೆ ರಾಯನ್ ಸ್ಕೂಲ್ ಬಸ್ ಚಾಲಕ ಅತಿವೇಗ ಹಾಗೂ ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ಬಸ್ಸಿನ ಮುಂಭಾಗದ ಎಡಭಾಗ ಪಾದಚಾರಿ ನಿತೀಶ್ ಕುಮಾರ್ ಗೆ ಡಿಕ್ಕಿಯಾಗಿದೆ.

- Advertisement -

ಸ್ಕೂಲ್ ಬಸ್ಸಿನ ಚಾಲಕ ತನ್ನ ವಾಹನ ಸಮೇತ ಪರಾರಿಯಾಗಿದ್ದು ಗಂಭೀರವಾಗಿ ಗಾಯಗೊಂಡ ನಿತೀಶ್ ಕುಮಾರ್ ನನ್ನು ಲಯನ್ಸ್ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಬೆಳಿಗ್ಗೆ 10-40ರ ವೇಳೆ ಮೃತಪಟ್ಟಿದ್ದಾನೆ.

ಸುದ್ದಿ ತಿಳಿದ ತಕ್ಷಣವೇ ಸ್ಥಳಕ್ಕೆ ಎಚ್ ಎಎಲ್ ಸಂಚಾರ ಪೊಲೀಸರು ಧಾವಿಸಿ ಪರಿಶೀಲನೆ ನಡೆಸಿದರು. ನಂತರ ಪ್ರಕರಣ ದಾಖಲಿಸಿ ಅಪಘಾತಕ್ಕೆ ಕಾರಣನಾದ ರಾಯನ್ ಸ್ಕೂಲ್ ಬಸ್ ಚಾಲಕನನ್ನು ಬಂಧಿಸಿ ಮುಂದಿನ ತನಿಖೆಯನ್ನು ಕೈಗೊಂಡಿದ್ದಾರೆ ಎಂದು ಅವರು ತಿಳಿಸಿದರು.

Join Whatsapp