ದೇಶದಲ್ಲಿ ಮುಸ್ಲಿಮರ ಜನಸಂಖ್ಯೆ ಪ್ರಮಾಣ ಶೇ.14.2; ಜೈಲು ಬಂಧಿಗಳಲ್ಲಿ ಶೇ.30ರಷ್ಟು ಮುಸ್ಲಿಮರು: ಆಘಾತಕಾರಿ ಅಂಶ ಬೆಳಕಿಗೆ

Prasthutha|

ನವದೆಹಲಿ: ಭಾರತದ ಜನಸಂಖ್ಯೆಯಲ್ಲಿ ಮುಸ್ಲಿಮರ ಪ್ರಮಾಣವು ಶೇ.14.2ರಷ್ಟು. ಆದರೆ ಭಾರತದೆಲ್ಲೆಡೆಯ ಜೈಲುಗಳಲ್ಲಿ ಶೇ.19%ಕ್ಕಿಂತಲೂ ಹೆಚ್ಚಿನ ಸಂಖ್ಯೆಯಲ್ಲಿ ಮುಸ್ಲಿಮರು ಇದ್ದಾರೆ ಎಂಬ ಆಘಾತಕಾರಿ ಅಂಶ ಎನ್ ಸಿಆರ್ ಬಿ- ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ ವರದಿಯಿಂದ ಬೆಳಕಿಗೆ ಬಂದಿದೆ.

- Advertisement -

ಮುಸ್ಲಿಮರಿಗೆ ಕಾನೂನು ಸಹಾಯ ಸಿಗದಿರುವುದು, ಪೊಲೀಸ್ ಇಲಾಖೆಯಲ್ಲಿ ಮುಸ್ಲಿಮರ ಸಂಖ್ಯೆ ಕಡಿಮೆ ಇರುವುದು, ವಿದ್ಯಾವಂತರ ಕೊರತೆ, ಪೊಲೀಸರ ಪೂರ್ವಗ್ರಹದಿಂದ ಮೊಕದ್ದಮೆ ಹಾಕುವುದು ಇದಕ್ಕೆ ಪ್ರಮುಖ ಕಾರಣವೆನ್ನಲಾಗಿದೆ.

2020ರ ಫೆಬ್ರವರಿಯಲ್ಲಿ ಸಣ್ಣ ಅಂಗಡಿಯ 29ರ ಶಾನವಾಝ್ ಅನ್ಸಾರಿ ತನ್ನ ತಂಗಿಯ ಮದುವೆ ಮುಗಿಸಿ ಎರಡನೆಯ ದಿನ ಬರುವಾಗ ದಿಲ್ಲಿಯ ಶಿವ್ ವಿಹಾರದಲ್ಲಿ ಪೌರತ್ವ ವಿರುದ್ಧದ ಹೋರಾಟವು ಹಿಂಸಾಚಾರಕ್ಕೆ ತಿರುಗಿತ್ತು. ಆ ಕುಟುಂಬದ ಏಕೈಕ ದುಡಿಮೆಗಾರ ಅನ್ಸಾರಿ ಬದುಕುಳಿದ ಎನ್ನುವುದೇ ಹೆಚ್ಚು.

- Advertisement -

ಅದರ ಮರುದಿನ ಫೆಬ್ರವರಿ 24ರಂದು ಆತನ ಅಂಗಡಿಗೆ ಬೆಂಕಿ ಇಡಲಾಗಿತ್ತು. ಮಾರ್ಚ್ 3ರಂದು ಉರಿದ ಅಂಗಡಿ ನೋಡಲು ಬಂದ ಶಾನವಾಝ್ ನನ್ನು ಪೊಲೀಸರು ಕರೆದು, ಆತನ ಮೊಬೈಲ್ ಕಸಿದುಕೊಂಡು ಅಪರಾಧ ವಿಭಾಗದ ಕಚೇರಿಗೆ ಬರುವಂತೆ ತಿಳಿಸಿದ್ದರು.

ಸಹೋದರ ಹಾಗೂ ತಂದೆಯೊಂದಿಗೆ ಶಾನವಾಝ್ ಅಲ್ಲಿಗೆ ಹೋದಾಗ ಪೊಲೀಸರು ಆತನನ್ನು ಬಂಧಿಸಿದ್ದರು. ಗಲಭೆ, ಕೊಲೆ ಮತ್ತಿತರ ಸುಳ್ಳು ಕೇಸುಗಳನ್ನು ಹಾಕಿದ್ದರು. ಎರಡು ವರ್ಷಗಳಿಂದಲೂ ಆತ ಸೆರೆಮನೆಯಲ್ಲೇ ಇದ್ದಾನೆ. 16 ಕೇಸು, ಒಂದು ಚಾರ್ಜ್ ಶೀಟ್ ಸಲ್ಲಿಸಲಾಗಿದೆ.

ನನ್ನ ಅಣ್ಣನಿಂದ ಖಾಲಿ ಕಾಗದಕ್ಕೆ ಸಹಿ ಮಾಡಿಸಿಕೊಂಡಿದ್ದಾರೆ. ಕೊಲೆ 302, ಗಲಭೆ 147, ಶಸ್ತ್ರಾಸ್ತ್ರ ಬಳಕೆ 148 ಮೊದಲಾದ ವಿಧಿಗಳಡಿ ಮೊಕದ್ದಮೆ ಹಾಕಲಾಗಿದೆ ಎಂದು 20ರ ಹರೆಯದ ಆತನ ಸಹೋದರ ಶಾಜೆಬ್ ಹೇಳಿದ್ದಾನೆ. ಹಾಗೆ ಒತ್ತಡಕ್ಕೆ ಜಾರಿದ ಶಾಜೆಬ್ ಜೂನ್ 2020ರಲ್ಲಿ ಹೃದಯಾಘಾತದಲ್ಲಿ ಮೃತಪಟ್ಟಿದ್ದಾನೆ.

ಸಂಪಾದನೆ ಇಲ್ಲದೆ ಇರುವುದರಿಂದ ಇದ್ದ ಆಸ್ತಿಯನ್ನೆಲ್ಲಾ ಮಾರುತ್ತಿದ್ದೇವೆ ಎಂದು ಆತನ ತಾಯಿ ಶಮೀನಾ ಹೇಳಿದರು.
ನನ್ನ ಮಗಳು ಇಲ್ಲವೇ ಕೆಲವೊಮ್ಮೆ ನೆರೆಮನೆಯವರು ಆಹಾರ ಕಳುಹಿಸುತ್ತಾರೆ ಎಂದು ಅನಾರೋಗ್ಯಕ್ಕೆ ತುತ್ತಾಗಿರುವ ಶಮೀನಾ ಹೇಳುತ್ತಾರೆ.

ಅಸ್ಸಾಂ ಅತಿ ಹೆಚ್ಚು 47%, ಪಶ್ಚಿಮ ಬಂಗಾಳ 33%, ಕೇರಳ 32%, ತೆಲಂಗಾಣ 23.50%, ದಿಲ್ಲಿ 21% ಅತಿ ಹೆಚ್ಚು ಪ್ರಮಾಣದಲ್ಲಿ ಮುಸ್ಲಿಮರು ಜೈಲಿನಲ್ಲಿರುವ ರಾಜ್ಯಗಳಾಗಿವೆ.

ಎನ್ ಸಿಆರ್ ಬಿ- ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ ಡಿಸೆಂಬರ್ 27, 2021ರಂದು ಬಿಡುಗಡೆ ಮಾಡಿದ ವರದಿಯಂತೆ ಜೈಲಲ್ಲಿ ಮುಸ್ಲಿಮರ ಪ್ರಮಾಣ 19.1%.

2020ರಲ್ಲಿ ಜೈಲಲ್ಲಿ ಇದ್ದ ಮುಸ್ಲಿಮರ ಸಂಖ್ಯೆ 4,88,511 ಅಂದರೆ 19.1%. ಜನಸಂಖ್ಯೆ 20.4 ಕೋಟಿ ಅಂದರೆ 14.2%.
ವಿಚಾರಣಾಧೀನ ಖೈದಿಗಳಲ್ಲಿ ಶೇ. 17.4ರಷ್ಟು ಮುಸ್ಲಿಮರು, ಬಂಧಿತರಲ್ಲಿ ಶೇ. 30ರಷ್ಟು ಮುಸ್ಲಿಮರು ಮತ್ತು ಇತರ ಇರುವ ಸೆರೆಯಾಳು ಮುಸ್ಲಿಮರ ಪ್ರಮಾಣ ಶೇ.57.2ರಷ್ಟು. ಇತರ ಎನ್ನುವುದು ಸಿವಿಲ್ ಕೇಸುಗಳಾಗಿವೆ. ಮುಖ್ಯವಾಗಿ ಪೌರತ್ವ ಕಾಯ್ದೆ ವಿರೋಧಿಯಂಥವುಗಳಲ್ಲಿ ಬಂಧಿತರಾದವರು ಇದರಲ್ಲಿ ಸೇರಿದ್ದಾರೆ.

ಅಸ್ಸಾಂನಲ್ಲಿ ವಿಚಾರಣಾಧೀನ ಮುಸ್ಲಿಮರ ಸಂಖ್ಯೆ 52.35%. ಪಶ್ಚಿಮ ಬಂಗಾಳದಲ್ಲಿ ವಿಚಾರಣಾಧೀನ ಮುಸ್ಲಿಮರ ಸಂಖ್ಯೆ 43.5%ರಷ್ಟು.

ಹರಿಯಾಣದಲ್ಲಿ 2020ರಲ್ಲಿ ಬಂಧನಕ್ಕೊಳಗಾದವರಲ್ಲಿ ಶೇಕಡಾ 100ರಷ್ಟು ಮುಸ್ಲಿಮರೇ ಆಗಿದ್ದಾರೆ. ಜಮ್ಮು ಕಾಶ್ಮೀರದಲ್ಲಿ 96.4% ಮತ್ತು ತೆಲಂಗಾಣದಲ್ಲಿ 49.5% ಮುಸ್ಲಿಮರ ಬಂಧನವಾಗಿದೆ.

ಸಾಮಾಜಿಕ ತಾರತಮ್ಯ, ಅನಕ್ಷರತೆ, ಬಡತನ ಇದರ ಹಿಂದಿದೆ ಎಂದು ವರದಿಗಳು ಬೊಟ್ಟು ಮಾಡಿವೆ.

ಮುಂಬೈ ಟಾಟಾ ಇನ್ ಸ್ಟಿಟ್ಯೂಟಿನ ಕ್ರಿಮಿನಾಲಜಿಸ್ಟ್ ಪ್ರೊಫೆಸರ್ ವಿಜಯ ರಾಘವನ್ ಅವರ ಪ್ರಕಾರ, ಈ ವಿಷಯದಲ್ಲಿ ತೀರಾ ಕಡಿಮೆ ಸಂಶೋಧನೆ ಆಗಿದೆ ಎಂದು ಹೇಳುತ್ತಾರೆ.

ಇದರ ತೀವ್ರ ವಿಶ್ಲೇಷಣೆ ಅಗತ್ಯ ಎನ್ನುತ್ತಾರೆ ಉತ್ತರ ಪ್ರದೇಶದ ಮಾಜಿ ಪೊಲೀಸ್ ಮಹಾ ನಿರ್ದೇಶಕ ವಿಕ್ರಂ ಸಿಂಗ್. ಅನ್ಯಾಯದ ಚಾರ್ಜ್ ಶೀಟ್ ಗಳ ಅಧ್ಯಯನವೂ ಅಗತ್ಯ ಎಂದು ಅವರು ಹೇಳುತ್ತಾರೆ.

ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ, ಮುಸ್ಲಿಂ ಬಂಧಿತರ ಸಂಖ್ಯೆ ನೀಡುತ್ತದೆ. ಆದರೆ ಅವರ ಸಾಮಾಜಿಕ ಮತ್ತು ಆರ್ಥಿಕ ಸ್ಥಿತಿಗತಿಯನ್ನು ಹೇಳುವುದಿಲ್ಲ.

ಸೆರೆಯಾಳುಗಳಲ್ಲಿ 20.7% ಪರಿಶಿಷ್ಟ ಜಾತಿಗಳವರು, 11.2% ಪರಿಶಿಷ್ಟ ಪಂಗಡದವರು ಇದ್ದಾರೆ. ಆದರೆ ಅವರ ಜನಸಂಖ್ಯಾ ಪ್ರಮಾಣ ಕ್ರಮವಾಗಿ 16.1% ಮತ್ತು 8.2%.ರಷ್ಟಿದೆ.

2011ರಲ್ಲಿ ರಾಘವನ್ ಮತ್ತು ಡಾ. ರೋಶ್ನಿ ನಾಯರ್ ನಡೆಸಿದ ಅಧ್ಯಯನದಂತೆ ಹೆಚ್ಚಿನ ಮುಸ್ಲಿಮರು ದೈಹಿಕ ದಾಳಿ ಸಂಬಂಧ ಬಂಧನಕ್ಕೀಡಾಗಿದ್ದಾರೆ. ಶೇ.52.8ರಷ್ಟು ಹಲ್ಲೆ ವಿಷಯದಲ್ಲಿ ಶಿಕ್ಷೆಗೀಡಾಗಿದ್ದಾರೆ. ನಂತರದ ಸ್ಥಾನದಲ್ಲಿ ಕಿಡ್ನಾಪ್ ಮತ್ತು ಮಾನವ ಕಳ್ಳ ಸಾಗಣೆ ವಿಷಯದಲ್ಲಿ ಶಿಕ್ಷೆಗೀಡಾದವರು ಇದ್ದಾರೆ. ಅನಂತರದ್ದು ಆಸ್ತಿ ಜಗಳ, ಡಕಾಯತಿ, ಲೂಟಿ ಇತ್ಯಾದಿ ಬರುತ್ತದೆ.

ಮಹಾರಾಷ್ಟ್ರದಲ್ಲಿ 2.7% ರಷ್ಟು ಮುಸ್ಲಿಮರು ಎಂಕೋಕಾ ಸಂಘಟಿತ ಅಪರಾಧ ತಡೆ ಕಾಯ್ದೆಯಡಿ ಬಂಧಿತರಾಗಿದ್ದಾರೆ.
ರಾಜ್ಯ ಅಲ್ಪಸಂಖ್ಯಾತರ ಆಯೋಗವು ಕೆಲ ಮಟ್ಟಿನ ಅಧ್ಯಯನ ಮಾಡಿದರೂ ಸಾಮಾಜಿಕ, ಆರ್ಥಿಕ ಸ್ಥಿತಿಗತಿ ಸುಧಾರಿಸಲು ಏನೂ ಮಾಡಿಲ್ಲ.

ಮುಸ್ಲಿಂ ಸೆರೆಯಾಳುಗಳಲ್ಲಿ ಶೇ.65.5ರಷ್ಟು ಮಂದಿ 18- 30ರ ಪ್ರಾಯದ ಯುವಕರು. 31- 40ರ ಪ್ರಾಯದವರ ಪ್ರಮಾಣ ಶೇ.26.3ರಷ್ಟು.ಪೊಲೀಸರ ತಾರತಮ್ಯವೇ ಮುಸ್ಲಿಂ ಜೈಲು ವಾಸಿಗಳ ಸಂಖ್ಯೆ ಅಧಿಕವಿರಲು ಮುಖ್ಯ ಕಾರಣವಾಗಿದೆ.

ಉತ್ತರ ಪ್ರದೇಶದ ಇತ್ತೀಚೆಗೆ ನಿವೃತ್ತರಾದ ಇನ್ಸ್ ಪೆಕ್ಟರ್ ಜನರಲ್ ಎಸ್. ಆರ್. ಧಾರಾಪುರಿ ಪ್ರಕಾರ, ಮುಸ್ಲಿಮರು ಅಪರಾಧವೆಸಗುವವರು. ಶಿಕ್ಷಿತರಲ್ಲಿ ಶೇ.20ರಷ್ಟು ಹಾಗೂ ವಿಚಾರಣಾಧೀನರಲ್ಲಿ ಶೇ.50ರಷ್ಟಯ ಮುಸ್ಲಿಮರಿದ್ದಾರೆ.
ಅಪರಾಧ ನಡೆದಾಗ ಅಂದಾಜಿನಲ್ಲಿ ಇಲ್ಲವೆ, ಹಿಂದೆ ಅಂತಹ ಅಪರಾಧ ಮಾಡಿದವರು ಎಂಬ ನೆಲೆಯಲ್ಲೂ ಪೊಲೀಸರು ಬಂಧಿಸಿ ಜೈಲಿಗಟ್ಟುತ್ತಾರೆ.

ಉತ್ತರ ಪ್ರದೇಶ, ಗುಜರಾತ್, ಮಧ್ಯ ಪ್ರದೇಶದಂಥ ರಾಜ್ಯಗಳಲ್ಲಿ ಮುಸ್ಲಿಮರನ್ನು ಗುರಿಯಾಗಿಸಿ ಮೊಕದ್ದಮೆಗಳು ದಾಖಲಾಗುತ್ತವೆ ಎನ್ನಲಾಗಿದೆ.ಶೇ.14ರಷ್ಟು ಮುಸ್ಲಿಮರು ಸಹಜವಾಗಿಯೇ ಅಪರಾಧ ಎಸಗುವವರು. ಶೇ. 36ರಷ್ಟು ಮುಸ್ಲಿಮರು ಅಪರಾಧ ಮಾಡಲು ಸಿದ್ಧರಿರುತ್ತಾರೆ ಎಂದು ಪೊಲೀಸ್ ವರದಿಗಳಲ್ಲಿ ಬರೆಯಲಾಗಿದೆ.

ಎನ್ ಸಿಅರ್ ಬಿ ವರದಿಯಂತೆ 2012ರಲ್ಲಿ ಭಾರತದ ಪೊಲೀಸರಲ್ಲಿ ಮುಸ್ಲಿಮರ ಪ್ರಮಾಣವು 6.7% ಮಾತ್ರ.
ಸಮಾಜ ಸಂಶೋಧಕಿ ರಾಧಿಕಾ ಝಾ ಎಂಬವರು ಮಾನವ ಸಂಪನ್ಮೂಲ ಅಭಿವೃದ್ಧಿ ಇಲಾಖೆ ಇದನ್ನೇಕೆ ಗಮನಿಸುತ್ತಿಲ್ಲ ಎಂದು ಕೇಳಿದ್ದಾರೆ.

2011- 13ರ ಮಾಹಿತಿಯಂತೆ ಆಂಧ್ರಪ್ರದೇಶ, ಮಣಿಪುರ, ಅಂಡಮಾನ್ ನಿಕೋಬಾರ್ ಗಳಲ್ಲಿ ಮಾತ್ರ ಪೊಲೀಸ್ ಇಲಾಖೆಯಲ್ಲಿ ಮುಸ್ಲಿಮರ ಪ್ರಮಾಣವು ಅವರ ಜನಸಂಖ್ಯೆ ಪ್ರಮಾಣಕ್ಕಿಂತೆ ತುಸು ಹೆಚ್ಚು ಇದೆ ಎಂದು ರಾಧಿಕಾ ಜಾ ದಾಖಲಿಸಿದ್ದಾರೆ.
ಜಾತ್ಯತೀತತೆ ಎಲ್ಲ ಇಲಾಖೆಗಳಲ್ಲಿ ಬಂದರೆ ಇದನ್ನು ಸರಿಪಡಿಸಬಹುದು ಎನ್ನುತ್ತಾರೆ ಧಾರಾಪುರೆ.

2006ರಲ್ಲಿ ಮುಂಬೈಯ ಹೊರ ವಲಯದ ಮೀರಾ ರೋಡ್ ನ ಸಾಜಿದ್ ಮಾರ್ಗೋಬ್ ಅನ್ಸಾರಿಯನ್ನು ಮುಂಬಯಿ ಸ್ಫೋಟ ಸಂಬಂಧ ಬಂಧಿಸಿದಾಗ ಆತನ ವಯಸ್ಸು 29. ಸಹೋದರ ಖಾಲಿದ್ ಅನ್ಸಾರಿ ಸಹಿತ ಆ ವಯಸ್ಸಿನವರನ್ನು ಪೊಲೀಸರು ಕತೆ ಕಟ್ಟಿ ಬಂಧಿಸಿದ್ದರು. ಅವರು ಇನ್ನೂ ಸೆರೆಮನೆಯಲ್ಲಿ ಕೊಳೆಯುತ್ತಿದ್ದಾರೆ ಎಂದು ಅವರು ಹೇಳುತ್ತಾರೆ.

ಸಾಜಿದ್, ಸಿಮಿ ವಿದ್ಯಾರ್ಥಿ ಸಂಘಟನೆ ಜೊತೆ ಇದ್ದ ಎಂಬ ಕಾರಣಕ್ಕೆ ಪೊಲೀಸರು ಮತ್ತೆ ಮತ್ತೆ ಸ್ಟೇಷನ್ ಗೆ ಕರೆದು ಕೊನೆಗೆ ಸುಳ್ಳು ಮೊಕದ್ದಮೆ ಹೂಡಿದ್ದಾರೆ ಎನ್ನಲಾಗಿದೆ.

2017ರಲ್ಲಿ ಖಾಲಿದ್, ಬಾಂಬೆ ಹೈಕೋರ್ಟಿನಲ್ಲಿ ಸಾಜಿದ್ ಗೆ ವಿಧಿಸಿದ ಶಿಕ್ಷೆಯನ್ನು ಪ್ರಶ್ನಿಸಿದ್ದಾರೆ. ಆದರೆ ವಿಚಾರಣೆಯ ನೆಪದಲ್ಲಿ ಸುಮ್ಮನೆ ಎಳೆಯಲಾಗುತ್ತಿದೆ.

ಗುಜರಾತ್, ಕರ್ನಾಟಕ, ಕೇರಳಗಳಲ್ಲಿ ಮುಸ್ಲಿಮರಿಗೆ ಮರಣ ದಂಡನೆ ವಿಧಿಸಿದ್ದನ್ನು ರಾಷ್ಟ್ರೀಯ ಕಾನೂನು ಸೇವಾ ಪ್ರಾಧಿಕಾರ ವಿಶೇಷವಾಗಿ ನಮೂದಿಸಿದೆ.

ಗುಜರಾತಿನಲ್ಲಿ ಮುಸ್ಲಿಮರು 79%, ಕರ್ನಾಟಕದಲ್ಲಿ ಕ್ರಿಶ್ಚಿಯನರು ಸೇರಿ 31.1%, ಕೇರಳದಲ್ಲೂ ಕ್ರಿಶ್ಚಿಯನರು ಸೇರಿ 60% ಮುಸ್ಲಿಮರಿಗೆ ಮರಣ ದಂಡನೆ ವಿಧಿಸಲಾಗಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

Join Whatsapp