ರಾಜ್ಯಸಭೆಯಲ್ಲಿ ಭಾರೀ ವಿರೋಧದ ನಡುವೆ ಯುನಿಫಾರ್ಮ್ ಸಿವಿಲ್ ಕೋಡ್ ಕುರಿತ ಖಾಸಗಿ ಮಸೂದೆ ಮಂಡನೆ

Prasthutha|

ನವದೆಹಲಿ: ಏಕರೂಪ ನಾಗರಿಕ ಸಂಹಿತೆ -ಯುನಿಫಾರ್ಮ್ ಸಿವಿಲ್ ಕೋಡ್ – ಯುಸಿಸಿ ಕುರಿತ ಖಾಸಗಿ ಮಸೂದೆಯನ್ನು ರಾಜ್ಯಸಭೆಯಲ್ಲಿ ವಿಪಕ್ಷ ಸದಸ್ಯರ ಭಾರೀ ವಿರೋಧದ ನಡುವೆ ಮಂಡಿಸಲಾಗಿದೆ.

- Advertisement -

ಮಸೂದೆ ಮಂಡನೆಗೂ ಮೊದಲು  ನಡೆದ ಮತದಾನದಲ್ಲಿ ಪ್ರಸ್ತಾವದ ಪರವಾಗಿ 63 ಮಂದಿ ಸಂಸದರು, ವಿರುದ್ಧವಾಗಿ 23 ಮಂದಿ ಸದಸ್ಯರು ಧ್ವನಿ ಮತ ಚಲಾಯಿಸಿದರು.

ಬಿಜೆಪಿ ಸಂಸದ ಕಿರೋಡಿ ಲಾಲ್ ಮೀನಾ ಮಸೂದೆ ಮಂಡನೆ ಪ್ರಸ್ತಾವ ಮಂಡಿಸಿದರು.

- Advertisement -

ತೃಣಮೂಲ ಕಾಂಗ್ರೆಸ್ ಸದಸ್ಯರು ಮಸೂದೆಯನ್ನು ಮಂಡಿಸುವುದರ ವಿರುದ್ಧ ಪ್ರತಿಭಟಿಸಿದರು. ಈ ಮಸೂದೆ ದೇಶದಲ್ಲಿರುವ ಸಾಮಾಜಿಕ ಚೌಕಟ್ಟು ಮತ್ತು ವಿವಿಧತೆಯಲ್ಲಿ ಏಕತೆಯನ್ನು ನಾಶಪಡಿಸುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ವಿರೋಧ ಪಕ್ಷದ ಸದಸ್ಯರು ಮಸೂದೆಯನ್ನು ಹಿಂಪಡೆದುಕೊಳ್ಳಲು ಒತ್ತಾಯಿಸಿದ್ದರಿಂದ, ರಾಜ್ಯಸಭೆಯ ಉಪ ಸಭಾಪತಿ ಜಗದೀಪ್ ಧನಕರ್ ಅವರು ಮತ ವಿಭಜನೆಗೆ ಸೂಚಿಸಿದರು. ಬಳಿಕ ಮಸೂದೆಯ ಪರವಾಗಿ 63 ಮತಗಳು ಮತ್ತು ಅದರ ವಿರುದ್ಧ 23 ಮತಗಳೊಂದಿಗೆ ಮಸೂದೆಯನ್ನು ಮಂಡಿಸುವ ಪ್ರಸ್ತಾಪವನ್ನು ಅಂಗೀಕರಿಸಲಾಯಿತು.



Join Whatsapp