ಕೌಶಲ್ಯಾಭಿವೃದ್ಧಿ ಇಲಾಖೆಯ ಸಹಾಯಕ ಮ್ಯಾನೇಜರ್ ಹುದ್ದೆಗೆ 65 ಲಕ್ಷ: ಕಾಂಗ್ರೆಸ್ ಆರೋಪ

Prasthutha|

ಬೆಂಗಳೂರು: ಕೌಶಲ್ಯಾಭಿವೃದ್ಧಿ ಇಲಾಖೆಯ ಸಹಾಯಕ ಮ್ಯಾನೇಜರ್ ಹುದ್ದೆಗೆ 65 ಲಕ್ಷ! ಬಿಜೆಪಿ ಸರ್ಕಾರ ಪ್ರಾಮಾಣಿಕವಾಗಿದ್ದರೆ ವಿಧಾನಸೌಧದ ಆವರಣದಲ್ಲೇ ಭ್ರಷ್ಟರಿಗೆ ಹುದ್ದೆ ಮಾರಾಟ ಮಾಡುವ ಧೈರ್ಯ ಬರಲು ಹೇಗೆ ಸಾಧ್ಯ. ಕೌಶಲ್ಯಾಭಿವೃದ್ಧಿ ಸಚಿವರಾದ ಅಶ್ವತ್ಥನಾರಾಯಣ ಅವರು ಕ್ಯಾಶಲ್ಲೇ ಅಭಿವೃದ್ಧಿಯಾಗಲು ಈ ಪಟಾಲಂನ್ನು ಮುಂದೆ ಬಿಟ್ಟಿದ್ದಾರೆಯೇ? ಎಂದು ಕಾಂಗ್ರೆಸ್ ಪ್ರಶ್ನಿಸಿದೆ.

- Advertisement -

ಈ ಬಗ್ಗೆ ಕಾಂಗ್ರೆಸ್ ಟ್ವೀಟ್ ಮಾಡಿ, ಈ ಸಂಬಂಧ ಮಾಧ್ಯಮವೊಂದರಲ್ಲಿ ಬಂದ ವೀಡಿಯೋವೊಂದನ್ನು ಶೇರ್ ಮಾಡಿದೆ.

ವಿಧಾನಸೌಧ ವ್ಯಾಪಾರಸೌಧವಾಗಿದೆ ಎಂಬುದಕ್ಕೆ ಮತ್ತೊಂದು ಸಾಕ್ಷಿ. ವಿಧಾನಸೌಧದ ಆವರಣದಲ್ಲೇ ಸರ್ಕಾರಿ ಹುದ್ದೆ ಮಾರಾಟ ಮಾಡಲಾಗುತ್ತಿದೆ.ಬೊಮ್ಮಾಯಿ ಅವರೇ, ವಿಧಾನಸೌಧದಲ್ಲೇ ರಾಜಾರೋಷವಾಗಿ ಹುದ್ದೆ ಮಾರಾಟ ನಡೆಯುತ್ತಿದ್ದರೂ ತಮ್ಮ ‘ಪ್ರಾಮಾಣಿಕ ಸರ್ಕಾರ’ದ ಕಣ್ಣಿಗೆ ಬಿದ್ದಿಲ್ಲವೇ? ಅಥವಾ ಮಾರಾಟದ ಏಜೆಂಟರನ್ನು ನೀವೇ ಸಾಕಿಕೊಂಡಿದ್ದೀರಾ? ಎಂದು ಕಾಂಗ್ರೆಸ್ ಕುಟುಕಿದೆ.

Join Whatsapp