ಮಂಗಳೂರು: ಲಾಕ್ ಡೌನ್ ಹಿನ್ನೆಲೆ 65 ದಿನಗಳ ಕಾಲ ಸಂಚಾರ ನಿಲ್ಲಿಸಿದ್ದ ಖಾಸಗಿ ಬಸ್ ಗಳ ಸಂಚಾರ ಜುಲೈ 1ರಿಂದ ಆರಂಭವಾಗಲಿದ್ದು, ಬಸ್ ಮಾಲೀಕರ ಸಂಘ ಸಿದ್ಧತೆ ಮಾಡಿಕೊಂಡಿದೆ.
“ಕೊರೋನಾ ಮಾರ್ಗಸೂಚಿ ಪಾಲಿಸಿ ಬಸ್ ಸಂಚಾರ ಆರಂಭವಾಗಲಿದೆ. ಬಸ್ ಟಿಕೆಟ್ ದರ ಶೇ.20ರಷ್ಟು ಏರಿಕೆ ಮಾಡಲಾಗಿದ್ದು, 10 ರೂ ಇದ್ದ ಮೊದಲ ಸ್ಟೇಜ್ ದರ 12 ರೂ. ಆಗಲಿದೆ. ಕೊರೊನಾ ಮಾರ್ಗಸೂಚಿ ಇರುವ ತನಕ ದರ ಏರಿಕೆ ಇರಲಿದೆ” ಎಂದು ಬಸ್ ಮಾಲೀಕರ ಸಂಘದ ಅಧ್ಯಕ್ಷ ದಿಲ್ ರಾಜ್ ಆಳ್ವ ಮಾಹಿತಿ ನೀಡಿದ್ದಾರೆ.
ಈಗಾಗಲೇ ದ.ಕ ಜಿಲ್ಲಾ ಬಸ್ ಮಾಲೀಕರ ಅಧ್ಯಕ್ಷ ದಿಲ್ ರಾಜ್ ಆಳ್ವ ಹಾಗೂ ಕೆನರಾ ಬಸ್ ಮಾಲೀಕರ ಸಂಘದ ಅಧ್ಯಕ್ಷ ರಾಜವರ್ಮ ಬಲ್ಲಾಳ್ ಅವರ ನೇತೃತ್ವದಲ್ಲಿ ಸಭೆ ನಡೆಸಿದ್ದು, ಜುಲೈ 1ರಿಂದ ಖಾಸಗಿ ಬಸ್ ಸಂಚಾರಕ್ಕೆ ತೀರ್ಮಾನಿಸಲಾಗಿದೆ. ಈ ಹಿನ್ನೆಲೆ ಜಿಲ್ಲಾಡಳಿತದ ಸೂಚನೆಯನ್ನು ಪಾಲಿಸಿಕೊಂಡ ಖಾಸಗಿ ಬಸ್ ಸಂಚಾರ ಆರಂಭಗೊಳ್ಳಲಿದೆ.