ಕುಂದಾಪುರದಲ್ಲಿ ತಾರಕಕ್ಕೇರಿದ ಕೇಸರಿ ಶಾಲು ವಿವಾದ: ಹಿಜಾಬ್ ಧರಿಸಿದ ವಿದ್ಯಾರ್ಥಿನಿಯರನ್ನು ಮೈದಾನದಲ್ಲೇ ತಡೆದು ನಿಲ್ಲಿಸಿದ ಪ್ರಾಂಶುಪಾಲರು

Prasthutha|

►ಜೈ ಶ್ರೀರಾಮ್ ಘೋಷಣೆ ಕೂಗಿ ಕಾಲೇಜು ಆವರಣಕ್ಕೆ ಪ್ರವೇಶಿಸಿದ ನೂರಕ್ಕೂ ಅಧಿಕ ವಿದ್ಯಾರ್ಥಿಗಳು!

- Advertisement -

ಉಡುಪಿ: ಕ್ಯಾಂಪಸ್ ಗೇಟ್ ದಾಟಿ ಒಳಗೆ ಬಂದ ವಿದ್ಯಾರ್ಥಿನಿಯರನ್ನು ಪ್ರಾಂಶುಪಾಲರು  ಮೈದಾನದಲ್ಲೇ ತಡೆದು ನಿಲ್ಲಿಸಿ ಘಟನೆ ಕುಂದಾಪುರ ಸರ್ಕಾರಿ ಕಾಲೇಜಿನಲ್ಲಿ ಶುಕ್ರವಾರ ನಡೆದಿದೆ.

ಗುರುವಾರ ಕೂಡ ಇಂತಹ ಘಟನೆ ಕಾಲೇಜಿನಲ್ಲಿ ನಡೆದಿದ್ದು, ಆದರೆ ಇಂದು ಕಾಲೇಜಿಗೆ  ವಿದ್ಯಾರ್ಥಿನಿಯರ ಜೊತೆ  ಪೋಷಕರು ಆಗಮಿಸಿದ್ದುಅವರನ್ನು ಕೂಡ ತಡೆಹಿಡಿಯಲಾಗಿತ್ತು. ವಿದ್ಯಾರ್ಥಿನಿಯರು ಹಾಗೂ ಪೋಷಕರು ತರಗತಿಗೆ ಬಿಡುವಂತೆ ಮನವಿ ಮಾಡಿದರೂ ಪ್ರಾಂಶುಪಾಲರು ಅವರನ್ನು ಗೇಟಿನ ಹೊರಗಡೆ ನಿಲ್ಲಿಸಿದ್ದಾರೆ.

- Advertisement -

ಅಲ್ಲದೆ ಪ್ರತಿಭಟನೆ ನಡೆಸಿದರೆ FIR ಮಾಡುವ ಎಚ್ಚರಿಕೆ ಪ್ರಾಂಶುಪಾಲರು ನೀಡಿದ್ದಾರೆ. ಈ ವೇಳೆ ಕುಂದಾಪುರ ಠಾಣಾ ಸರ್ಕಲ್ ಇನ್ಸ್ ಪೆಕ್ಟರ್ ಶ್ರೀಕಾಂತ್ ಪೋಷಕರನ್ನು ತರಾಟೆ ತೆಗೆದುಕೊಂಡಿದ್ದಾರೆ.

ಅಲ್ಲದೆ ನೂರಕ್ಕೂ ಅಧಿಕ ವಿದ್ಯಾರ್ಥಿಗಳು ಕೇಸರಿ ಶಾಲನ್ನು ಬ್ಯಾಗಿನಲ್ಲಿ ಹಾಕಿಕೊಂಡು ಬಂದು ಕಾಲೇಜಿನಲ್ಲಿ ಅದನ್ನು ಧರಿಸಿದ್ದಾರೆ. ಈ ವೇಳೆ ಅವರನ್ನು ಕೂಡ ಕಾಲೇಜಿನ ಹೊರಗಡೆ ಕಳುಹಿಸಿದ್ದಾರೆ.

Join Whatsapp