ಪ್ರಧಾನಿ ಸಲಹೆಗಾರ ಅಮರ್ಜಿತ್ ಸಿನ್ಹಾ ರಾಜೀನಾಮೆ

Prasthutha|

ಇತ್ತೀಚೆಗೆ ಪ್ರಧಾನಿ ಕಚೇರಿಯಿಂದ ರಾಜೀನಾಮೆ ನೀಡುತ್ತಿರುವ ಎರಡನೇ ಅತ್ಯುನ್ನತ ಅಧಿಕಾರಿ ಸಿನ್ಹಾ

- Advertisement -

ಹೊಸದಿಲ್ಲಿ: ಪ್ರಧಾನಿ ನರೇಂದ್ರ ಮೋದಿ ಅವರ ಸಲಹೆಗಾರ ಅಮರ್ಜಿತ್ ಸಿನ್ಹಾ ರಾಜೀನಾಮೆ ನೀಡಿದ್ದಾರೆ. 2020ರ ಫೆಬ್ರವರಿಯಲ್ಲಿ ಅಮರ್ಜಿತ್ ಸಿನ್ಹಾ ಅವರನ್ನು ಮೋದಿಯ ಸಲಹೆಗಾರರಾಗಿ ನೇಮಿಸಲಾಗಿತ್ತು.

ಸಿನ್ಹಾ ಬಿಹಾರ ಕೇಡರ್‌ನ 1983ರ ಬ್ಯಾಚ್‌ನ ಐಎಎಸ್ ಅಧಿಕಾರಿಯಾಗಿದ್ದು, ಅವರ ರಾಜೀನಾಮೆಗೆ ಕಾರಣ ತಿಳಿದು ಬಂದಿಲ್ಲ. ಇತ್ತೀಚೆಗೆ ಪ್ರಧಾನಿ ಕಚೇರಿಯಿಂದ ರಾಜೀನಾಮೆ ನೀಡುತ್ತಿರುವ ಎರಡನೇ ಅತ್ಯುನ್ನತ ಅಧಿಕಾರಿ ಅಮರ್ಜೀತ್ ಸಿನ್ಹಾ. ಮುಖ್ಯ ಸಲಹೆಗಾರರಾಗಿದ್ದ ಪಿ.ಕೆ.ಸಿನ್ಹಾ ಮಾರ್ಚ್‌ನಲ್ಲಿ ರಾಜೀನಾಮೆ ನೀಡಿದ್ದರು.

- Advertisement -

ಅಮರ್ಜಿತ್ ಸಿನ್ಹಾ ಅವರು ಗ್ರಾಮೀಣಾಭಿವೃದ್ಧಿ ಸಚಿವಾಲಯದ ಕಾರ್ಯದರ್ಶಿಯಾಗಿ ನಿವೃತ್ತರಾದ ನಂತರ ಮತ್ತೊಬ್ಬ ಪ್ರಮುಖ ಅಧಿಕಾರಿ ಭಾಸ್ಕರ್ ಖುಲೈ ಅವರೊಂದಿಗೆ ಸಲಹೆಗಾರರಾಗಿ ನೇಮಕಗೊಂಡಿದ್ದರು.

ಮೂರು ದಶಕಗಳ ವೃತ್ತಿಜೀವನದಲ್ಲಿ ಸಿನ್ಹಾ ಅವರು ಶಿಕ್ಷಣ ಮತ್ತು ಪಂಚಾಯತ್ ರಾಜ್ ಸಚಿವಾಲಯದಲ್ಲಿ ಪ್ರಮುಖ ಹುದ್ದೆಗಳನ್ನು ನಿರ್ವಹಿಸಿದ್ದಾರೆ. ಗ್ರಾಮೀಣ ಅಭಿವೃದ್ಧಿಯ ಹೊರತಾಗಿ , ಅವರು ರಾಷ್ಟ್ರೀಯ ಗ್ರಾಮೀಣ ಆರೋಗ್ಯ ಮಿಷನ್ ಮತ್ತು ಸರ್ವ ಶಿಕ್ಷಾ ಅಭಿಯಾನದಂತಹ ಯೋಜನೆಗಳಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.

Join Whatsapp