2019ರಿಂದ 21 ಬಾರಿ ವಿದೇಶಕ್ಕೆ ಹಾರಿದ ಪ್ರಧಾನಿ ಮೋದಿ| ಪ್ರಯಾಣಕ್ಕೆ ತಗುಲಿದ ಖರ್ಚು ಎಷ್ಟು ಗೊತ್ತೇ?

Prasthutha|

ಹೊಸದಿಲ್ಲಿ: ಪ್ರಧಾನಿ ನರೇಂದ್ರ ಮೋದಿ 2019 ರಿಂದ 21 ಬಾರಿ ವಿದೇಶ ಪ್ರವಾಸ ಕೈಗೊಂಡಿದ್ದು, ಪ್ರಯಾಣಕ್ಕೆ ತಗುಲಿದ ಒಟ್ಟು ಮೊತ್ತವನ್ನು ಕೇಳಿದರೆ ನೀವು ಹುಬ್ಬೇರುವಿರಿ!

- Advertisement -

ಪ್ರಧಾನಿ ನರೇಂದ್ರ ಮೋದಿ 2019 ರಿಂದ 21 ವಿದೇಶ ಪ್ರವಾಸಗಳನ್ನು ಮಾಡಿದ್ದು ಈ ಭೇಟಿಗಳಿಗಾಗಿ ಬರೋಬ್ಬರಿ ₹ 22.76 ಕೋಟಿಗೂ ಹೆಚ್ಚು ಖರ್ಚು ಮಾಡಲಾಗಿದೆ ಎಂದು ಕೇಂದ್ರ ಸರ್ಕಾರ ಗುರುವಾರ ರಾಜ್ಯಸಭೆಗೆ ತಿಳಿಸಿದೆ.

ರಾಷ್ಟ್ರಪತಿಗಳು ಎಂಟು ವಿದೇಶ ಪ್ರವಾಸಗಳನ್ನು ಕೈಗೊಂಡಿದ್ದಾರೆ. 2019 ರಿಂದ ಈ ಪ್ರವಾಸಗಳಿಗಾಗಿ ₹ 6.24 ಕೋಟಿಗೂ ಹೆಚ್ಚು ಮೊತ್ತವನ್ನು ಖರ್ಚು ಮಾಡಲಾಗಿದೆ ಎಂದು ವಿದೇಶಾಂಗ ವ್ಯವಹಾರಗಳ ರಾಜ್ಯ ಸಚಿವ ವಿ ಮುರಳೀಧರನ್ ರಾಜ್ಯಸಭೆಯಲ್ಲಿ ಪ್ರಶ್ನೆಯೊಂದಕ್ಕೆ ಲಿಖಿತ ಉತ್ತರದಲ್ಲಿ ತಿಳಿಸಿದ್ದಾರೆ. ರಾಷ್ಟ್ರಪತಿಗಳ ಭೇಟಿಗಾಗಿ ₹ 6,24,31,424, ಪ್ರಧಾನ ಮಂತ್ರಿಗಳ ಭೇಟಿಗಾಗಿ ₹ 22,76,76,934 ಮತ್ತು ವಿದೇಶಾಂಗ ಸಚಿವರ ಭೇಟಿಗಾಗಿ ₹ 20,87,01,475 ಮೊತ್ತವನ್ನು 2019 ರಿಂದ ಸರ್ಕಾರ ಭರಿಸಿದೆ ಎಂದು ಸಚಿವರು ಹೇಳಿದ್ದಾರೆ.

- Advertisement -

ರಾಷ್ಟ್ರಪತಿ ಎಂಟು ವಿದೇಶ ಪ್ರವಾಸಗಳನ್ನು ಕೈಗೊಂಡಿದ್ದರೆ, ಪ್ರಧಾನಿ 2019 ರಿಂದ 21 ಪ್ರವಾಸಗಳನ್ನು ಕೈಗೊಂಡಿದ್ದಾರೆ. ಈ ಅವಧಿಯಲ್ಲಿ ವಿದೇಶಾಂಗ ಸಚಿವ ಎಸ್ ಜೈಶಂಕರ್ ಅವರು 86 ವಿದೇಶ ಪ್ರವಾಸಗಳನ್ನು ಕೈಗೊಂಡಿದ್ದಾರೆ.

ರಾಷ್ಟ್ರಪತಿಗಳ ಎಂಟು ಪ್ರವಾಸಗಳಲ್ಲಿ ಏಳನ್ನು ರಾಮ್ ನಾಥ್ ಕೋವಿಂದ್ ಅವರು ಮಾಡಿದ್ದು, ಈಗಿನ ರಾಷ್ಟ್ರಪತಿ ದ್ರೌಪದಿ ಮುರ್ಮು ಕಳೆದ ಸೆಪ್ಟೆಂಬರ್‌ನಲ್ಲಿ ಯುಕೆಗೆ ಭೇಟಿ ನೀಡಿದ್ದರು.



Join Whatsapp