ನಾಳೆ ಕಲ್ಲಾಪುನಲ್ಲಿ ಸಾರಾ’ಸ್ ಐಸ್ ಕ್ರೀಮ್ ಪಾರ್ಲರ್ ಶುಭಾರಂಭ

Prasthutha|


ಮಂಗಳೂರು: ಮಂಗಳೂರು ಸುತ್ತಮುತ್ತಲಿನ ಪರಿಸರದ ನಿವಾಸಿಗಳಿಗೆ ಸಿಹಿ ಸುದ್ದಿಯೊಂದು ಬಂದಿದ್ದು, ನಾಳೆ ಕಲ್ಲಾಪುನಲ್ಲಿ ಸಾರಾ’ಸ್ ಐಸ್ ಕ್ರೀಮ್ ಪಾರ್ಲರ್ ಶುಭಾರಂಭಗೊಳ್ಳಲಿದೆ.

- Advertisement -


ತಾಜಾ, ನೈಸರ್ಗಿಕ ಐಸ್ ಕ್ರೀಂ ಸೇರಿದಂತೆ ನಾನಾ ರೀತಿಯ ಐಸ್ ಕ್ರೀಮ್’ಗಳು, ನೈಸರ್ಗಿಕ ಹಣ್ಣುಗಳ ಜ್ಯೂಸ್’ಗಳು ಈ ಮಳಿಗೆಯಲ್ಲಿ ಲಭ್ಯವಿದ್ದು, ಬಿಸಿ ಏರುತ್ತಿರುವ ಈ ಸಂದರ್ಭದಲ್ಲಿ ಮಂಗಳೂರು ಮತ್ತು ಕಾಸರಗೋಡು ಜನತೆಯ ದಾಹವನ್ನು ಐಸ್ ಕ್ರೀಮ್ ತಣಿಸಲಿದೆ.


ಫೆಬ್ರವರಿ 3ರಂದು ಸಂಜೆ 4 ಗಂಟೆಗೆ ಕಲ್ಲಾಪು ಮನ್ಹಾಸ್ ಮಂದಿ ಬಿಲ್ಡಿಂಗ್’ನಲ್ಲಿ ಸಾರಾ’ಸ್ ಐಸ್ ಕ್ರೀಮ್ ಪಾರ್ಲರ್ ಅನ್ನು ಅದರ ಮಾಲಕರಾದ ಅಶ್ರಫ್ ಅವರ ತಂದೆ ಸಜಿಪ ಮಸೀದಿ ಕಮಿಟಿ ಅಧ್ಯಕ್ಷ ಹಾಜಿ ಅಬ್ದುಲ್ ರಝಾಕ್ ಉದ್ಘಾಟಿಸಲಿದ್ದಾರೆ.

- Advertisement -


ಮಾಜಿ ಸಚಿವ ಹಾಗೂ ಮಂಗಳೂರು ಶಾಸಕ ಯು.ಟಿ.ಖಾದರ್, ಎಸ್ಡಿಪಿಐ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ರಿಯಾಝ್ ಫರಂಗಿಪೇಟೆ, ಖ್ಯಾತ ಹಾಸ್ಯ ನಟರಾದ ದೇವದಾಸ್ ಕಾಪಿಕಾಡ್, ಹೈದರ್ ಪರ್ತಿಪ್ಪಾಡಿ, ಉಳ್ಳಾಲ ದರ್ಗಾ ಕಮಿಟಿ ಅಧ್ಯಕ್ಷ ಅಬ್ದುರ್ರಶೀದ್ ಹಾಜಿ, ಯುವ ಮುಖಂಡ ರಾಕೇಶ್ ಮಲ್ಲಿ, ಮಾಜಿ ಶಾಸಕರಾದ ಮೊಯ್ದೀನ್ ಬಾವ, ಐವನ್ ಡಿಸೋಜಾ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿಗಳಾದ ಇನಾಯತ್ ಅಲಿ, ಕಟ್ಟಡ ಮಾಲೀಕರಾದ ಡಾ. ಅಬ್ದುಲ್ ಲತೀಫ್ ಯುನಿವರ್ಸಲ್, ಅಬ್ದುಲ್ ಕರೀಂ, ಮತ್ತಿತರರು ಪಾಲ್ಗೊಳ್ಳಲಿದ್ದಾರೆ ಎಂದು ಇಕ್ಬಾಲ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Join Whatsapp