ಬೆಂಗಳೂರು: ಬೆಲೆಯೇರಿಕೆಯ ಬಿಸಿ ಕೇವಲ ಇಂಧನಕ್ಕೆ ಮಾತ್ರವಲ್ಲ ಬಿಜೆಪಿಯ ಸಿ ಎಂ ಹುದ್ದೆಗೂ ತಟ್ಟಿದೆ ಎಂದು ಕಾಂಗ್ರೆಸ್ ಶಾಸಕ ಪ್ರಿಯಾಂಕ್ ಖರ್ಗೆ ಬಿಜೆಪಿ ಯ ವಿರುದ್ಧ ವ್ಯಂಗ್ಯವಾಡಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ಬಿಜೆಪಿ ಹೈಕಮಾಂಡ್ ಸಾವಿರಾರು ಕೋಟಿಗೆ ಸಿಎಂ ಹುದ್ದೆ ಮಾರುವ ಸಂಗತಿ ಹೊಸದಲ್ಲ, ಹಿಂದೆಯೇ ದಿ.ಅನಂತ್ ಕುಮಾರ್ ಮತ್ತು ಶ್ರೀ ಯಡಿಯೂರಪ್ಪನವರು ಹೇಳಿದ್ದರು, ಈಗ ಯತ್ನಾಳ್ ಅವರು ಹೇಳಿದ್ದಾರೆ ಅಷ್ಟೇ.
ಅಂದು 1000 ಕೋಟಿ ಇದ್ದಿದ್ದು ಇಂದು 2500 ಕೋಟಿಯಾಗಿದೆ. ಬರೇ ಪೆಟ್ರೋಲ್ ಡೀಸಲ್ ಅಲ್ಲ, ಬಿಜೆಪಿಯ ಸಿಎಂ ಹುದ್ದೆಗೂ ಬೆಲೆ ಏರಿಕೆಯ ಬಿಸಿ ತಟ್ಟಿದೆ ಎಂದು ಟಾಂಗ್ ನೀಡಿದ್ದಾರೆ.