ವಿಗ್ರಹ ಇರುವುದನ್ನು ಧೃಡಪಡಿಸಲು ತಾಜ್ ಮಹಲ್ ನ 22 ಮುಚ್ಚಿದ ದ್ವಾರಗಳ ಬಗ್ಗೆ ತನಿಖೆ ನಡೆಸಿ: ಹೈಕೋರ್ಟ್ ಗೆ ಅರ್ಜಿ

Prasthutha|

ಲಕ್ನೋ : ಹಿಂದೂ ದೇವತೆಗಳ ವಿಗ್ರಹಗಳ ಉಪಸ್ಥಿತಿಯನ್ನು ದೃಢಪಡಿಸಲು ತಾಜ್ ಮಹಲ್ ನ ಒಳಗಿನ 22 ಮುಚ್ಚಿದ ದ್ವಾರಗಳ ಬಗ್ಗೆ ತನಿಖೆ ನಡೆಸುವಂತೆ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಗೆ ನಿರ್ದೇಶನ ನೀಡುವಂತೆ ಕೋರಿ ಅಲಹಾಬಾದ್ ನ್ಯಾಯಾಲಯದ ಲಕ್ನೋ ಪೀಠಕ್ಕೆ ಅರ್ಜಿ ಸಲ್ಲಿಸಲಾಗಿದೆ.

- Advertisement -

ಸತ್ಯಶೋಧನಾ ಸಮಿತಿಯ ರಚನೆ ಮತ್ತು ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ (ASI) ಈ ಬಗ್ಗೆ ವರದಿ ಸಲ್ಲಿಸಬೇಕು ಎಂದು ಅರ್ಜಿಯಲ್ಲಿ ಕೋರಲಾಗಿದೆ. ಹಿಂದೂ ದೇವತೆಗಳ ವಿಗ್ರಹಗಳನ್ನು ಮುಚ್ಚಿದ ದ್ವಾರಗಳ ಹಿಂದೆ ಲಾಕ್ ಮಾಡಲಾಗಿದೆ ಎಂದು ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ.

ಈ ಸ್ಮಾರಕ, ಹಿಂದಿನ ಶಿವ ದೇವಾಲಯವಾಗಿದೆ ಎಂಬ ಬಗ್ಗೆ ಕೆಲವು ಇತಿಹಾಸಕಾರರು ಮತ್ತು ಕೆಲವು ಹಿಂದೂ ತಂಡಗಳ ಹೇಳಿಕೆಗಳನ್ನು ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ.

- Advertisement -

‘ಕೆಲವು ಹಿಂದೂ ತಂಡಗಳು ಮತ್ತು ಗೌರವಾನ್ವಿತ ಸಂತರು ಈ ಸ್ಮಾರಕವನ್ನು ಅನೇಕ ಇತಿಹಾಸಕಾರರು ಮತ್ತು ಮಾಹಿತಿಯ ಬೆಂಬಲದಿಂದ ಹಿಂದಿನ ಶಿವ ದೇವಾಲಯ ಎಂದು ಪ್ರತಿಪಾದಿಸುತ್ತಿದ್ದಾರೆ. ಆದಾಗ್ಯೂ ಅನೇಕ ಇತಿಹಾಸಕಾರರು ಇದನ್ನು ಮೊಘಲ್ ಚಕ್ರವರ್ತಿ ಶಹಜಹಾನ್ ನಿರ್ಮಿಸಿದ ತಾಜ್ ಮಹಲ್ ಎಂದು ನಂಬುತ್ತಾರೆ. ಕೆಲವು ವ್ಯಕ್ತಿಗಳು ತಾಜ್ ಮಹಲ್, ತೇಜೋ ಮಹಾಲಯ ಆಗಿದ್ದು, ಅನೇಕ ಜ್ಯೋತಿರ್ಲಿಂಗಗಳಲ್ಲಿ ಒಂದಾಗಿದೆ ಎಂದು ಭಾವಿಸುತ್ತಾರೆ. ಅಂದರೆ ಅತ್ಯುತ್ತಮ ಶಿವ ದೇವಾಲಯಗಳಲ್ಲಿ ಒಂದಾಗಿದೆ’ ಎಂದು ಮನವಿಯಲ್ಲಿ ತಿಳಿಸಲಾಗಿದೆ.

Join Whatsapp