ವಾಣಿಜ್ಯ ಬಳಕೆಯ LPG ಸಿಲಿಂಡರ್ ಬೆಲೆ ಇಳಿಕೆ

Prasthutha|

ನವದೆಹಲಿ: ವಾಣಿಜ್ಯ ಎಲ್’ಪಿಜಿ ಗ್ಯಾಸ್ ಸಿಲಿಂಡರ್ ಗಳ ಬೆಲೆ ಪರಿಷ್ಕರಿಸಿದ ನಂತರ ವಾಣಿಜ್ಯ ಬಳಕೆಯ ಎಲ್ ಪಿಜಿ ಸಿಲಿಂಡರ್ ಬೆಲೆ ಇಳಿಕೆ ಕಂಡಿದೆ.

- Advertisement -


19 ಕೆಜಿ ತೂಕದ ಸಿಲಿಂಡರ್ ಬೆಲೆ 83.50 ರೂ. ಇಳಿಕೆಯಾಗಿದ್ದು, ದೆಹಲಿಯಲ್ಲಿ 1,773 ರೂ.ಗೆ ಮಾರಾಟವಾಗುತ್ತಿದೆ. ಗೃಹ ಬಳಕೆ ಸಿಲಿಂಡರ್ ಬೆಲೆಯಲ್ಲಿ ಯಾವುದೇ ಬದಲಾವಣೆ ಕಂಡುಬಂದಿಲ್ಲ. ಕಳೆದ ತಿಂಗಳು ಮೇ 1 ರಂದು ವಾಣಿಜ್ಯ ಸಿಲಿಂಡರ್ ಬೆಲೆಯಲ್ಲಿ 171.50 ರೂ. ಕಡಿತಗೊಳಿಸಲಾಗಿತ್ತು.


ಅದಕ್ಕೂ ಮುನ್ನ ಏಪ್ರಿಲ್ ನಲ್ಲಿ 91.50 ರೂ. ಕಡಿತಗೊಳಿಸಲಾಗಿತ್ತು. ಆದರೆ ಗೃಹಬಳಕೆಯ ಎಲ್ ಪಿಜಿ ಸಿಲಿಂಡರ್ ದರ ಪರಿಷ್ಕರಣೆಯಾಗಿಲ್ಲ. 14.2 ಕೆಜಿ ತೂಕದ ಗೃಹ ಬಳಕೆಯ ಗ್ಯಾಸ್ ಸಿಲಿಂಡರ್’ಗಳ ದರ ಕಳೆದ ತಿಂಗಳಿನಂತೆಯೇ ಇದೆ. ಸದ್ಯ ವಾಣಿಜ್ಯ ಸಿಲಿಂಡರ್ ಬೆಲೆ ಕೋಲ್ಕತ್ತಾದಲ್ಲಿ 1,875.50 ರೂ., ಮುಂಬೈನಲ್ಲಿ 1,725 ರೂ., ಚೆನ್ನೈನಲ್ಲಿ 1,937ರೂ. ಗಳಿಗೆ ಮಾರಾಟವಾಗುತ್ತಿದೆ.

Join Whatsapp