ಬೆಂಗಳೂರು: ಬಿಜೆಪಿ ಪಕ್ಷಕ್ಕೆ ಸೇರುವಂತೆ ನನ್ನ ಮೇಲೆ ಒತ್ತಡ ಹೇರಲಾಗುತ್ತಿದೆ. ಅದಕ್ಕೆ ಒಪ್ಪದಿದ್ದಕ್ಕೆ ಸಂಚು ರೂಪಿಸಲಾಗಿದೆ. ಸರ್ಕಾರಿ ಸಂಸ್ಥೆಗಳು ನನ್ನ ವಿರುದ್ಧ ಪ್ರಕರಣ ದಾಖಲಿಸುತ್ತಿವೆ. ನನ್ನನ್ನು ಹೆದರಿಸುವುದು ಅಷ್ಟು ಸುಲಭವಲ್ಲ. ಬಿಜೆಪಿಯ 40% ಕಮಿಷನ್ ಸರ್ಕಾರದಿಂದ ನಾಡಿನ ಜನ ಬೇಸತ್ತಿದ್ದಾರೆ. ಈ ರಾಜಕೀಯ ಸೇಡಿಗೆ ಸರಿಯಾದ ಉತ್ತರ ಸಿಗಲಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ಸಚಿವರೊಬ್ಬರು 40% ಕಮಿಷನ್ ಕೇಳಿದ್ದಕ್ಕೆ ಕಾಂಟ್ರ್ಯಾಕ್ಟರ್ ಆತ್ಮಹತ್ಯೆ ಮಾಡಿಕೊಂಡರು. ರಾಜ್ಯ ಸರ್ಕಾರವು 40% ಕಮಿಷನ್ ಕೇಳುತ್ತಿದೆ ಎಂದು ಗುತ್ತಿಗೆದಾರರ ಸಂಘ ಸಾರ್ವಜನಿಕವಾಗಿ ಹೇಳಿದೆ. BJP ಪ್ರಾಯೋಜಿತ PSI ಹಗರಣ ಭೇದಿಸಿದ್ದರಿಂದ ಪೊಲೀಸ್ ನೇಮಕಾತಿ ಸ್ಥಗಿತಗೊಂಡಿದೆ. ಆದರೂ ಯಾರ ಮೇಲೂ ದಾಳಿ ನಡೆದಿಲ್ಲ, ಚಾರ್ಜ್ ಶೀಟ್ ಹಾಕಿಲ್ಲ ಎಂದು ಅವರು ಟೀಕಿಸಿದರು.