ಹೈಟಿ ದೇಶದ ಅಧ್ಯಕ್ಷರನ್ನು ಗುಂಡಿಕ್ಕಿ ಬರ್ಬರ ಹತ್ಯೆ!
Prasthutha: July 7, 2021

ಪೋರ್ಟ್ ಒ ಪ್ರಿನ್ಸ್: ಹೈಟಿ ಅಧ್ಯಕ್ಷ ಜುವಾನೆಲ್ ಮೋಸೆಸ್ ಅವರನ್ನು ಖಾಸಗಿ ನಿವಾಸದ ಎದುರು ಅಪರಿಚಿತರು ಗುಂಡಿಕ್ಕಿ ಬರ್ಬರವಾಗಿ ಹತ್ಯೆಗೈದಿದ್ದಾರೆ.
ದಾಳಿಯಲ್ಲಿ ಮೋಸೆಸ್ ಪತ್ನಿ ಮಾರ್ಟಿನ್ ಮೋಸೆಸ್ ಗಂಭೀರ ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಹೈಟಿಯ ಮಧ್ಯಂತರ ಪ್ರಧಾನ ಮಂತ್ರಿ ಕ್ಲೌಡ್ ಜೋಸೆಫ್ ಅಧ್ಯಕ್ಷರ ಸಾವನ್ನು ಪ್ರಕಟಿಸಿದ್ದಾರೆ.
ಅಧ್ಯಕ್ಷರ ಮೇಲಿನ ದಾಳಿಯನ್ನು “ಅಮಾನವೀಯ ಮತ್ತು ಕ್ರೂರ” ಎಂದು ಕ್ಲೌಡ್ ಬಣ್ಣಿಸಿದ್ದಾರೆ. ಬಡತನ ಮತ್ತು ರಾಜಕೀಯ ಅಸ್ಥಿರತೆ ಹೆಚ್ಚಾದಂತೆ ಹೈಟಿಯಲ್ಲಿ ಹಿಂಸಾಚಾರ ಹೆಚ್ಚಾಗಿದೆ. ಇಲ್ಲಿ ಆಹಾರದ ಕೊರತೆ ಹೆಚ್ಚಾಗಿದೆ ಎಂದು ಅಂತರರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ.
ದೇಶದಲ್ಲಿ ಹಿಂಸಾಚಾರ ಸಂಭವಿಸುವ ಬಗ್ಗೆ ಕಳವಳ ವ್ಯಕ್ತಪಡಿಸಿದ ಅಧಿಕಾರಿಗಳು, ಎಲ್ಲಾ ಅಗತ್ಯ ಕ್ರಮಗಳು ಮತ್ತು ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.
