ದೇಶಾದ್ಯಂತ ತೀವ್ರ ವಿರೋಧದ ನಡುವೆಯೂ ಮೂರು ಕೃಷಿ ಮಸೂದೆಗೆ ರಾಷ್ಟ್ರಪತಿ ಅಂಕಿತ

Prasthutha|

ಹೊಸದಿಲ್ಲಿ: ತೀವ್ರ ರಾಜಕೀಯ ಚರ್ಚೆಗೆ ಗ್ರಾಸವಾಗಿದ್ದ ಮತ್ತು  ಶಿರೋಮಣಿ ಅಕಾಲಿ ದಳ ಹಾಗೂ ಬಿಜೆಪಿ ನಡುವಿನ ಮೈತ್ರಿಗೆ ಹಾನಿ ಉಂಟು ಮಾಡಿದ್ದ ಎಲ್ಲಾ ಮೂರು ಕೃಷಿ ಮಸೂದೆಗಳಿಗೆ ರಾಷ್ಟ್ರಪತಿ ರಾಮ್‌ನಾಥ್ ಕೋವಿಂದ್ ರವರು ಅಂಕಿತ ಹಾಕುವುದರೊಂದಿಗೆ ಇಂದಿನಿಂದ ಮಸೂದೆಯು ಕಾನೂನಾಗಿ ಬದಲಾಗಿದೆ.

- Advertisement -

ಇದನ್ನು ಐತಿಹಾಸಿಕ ಸುಧಾರಣೆ ಎಂದು ಬಿಂಬಿಸಿರುವ ಕೇಂದ್ರ ಸರಕಾರ 21ನೆ ಶತಮಾನಕ್ಕೆ ಮುಂದುವರಿಯಲು ಮತ್ತು ತಮ್ಮ ಉತ್ಪಾದನೆಗೆ ಉತ್ತಮ ಬೆಲೆ ಪಡೆಯಲು ರೈತರಿಗೆ ನೆರವಾಗಲಿದೆ  ಎಂದಿದೆ.

ತೀವ್ರ ಕೋಲಾಹಲದ ನಡುವೆ ಈ ಮಸೂದೆಯನ್ನು ಕಳೆದ ವಾರ ರಾಜ್ಯಸಭೆಯಲ್ಲಿ ಅಂಗೀಕಾರಗೊಂಡ ಬಳಿಕ ರಾಷ್ಟ್ರಪತಿಯ ಅನುಮೋದನೆಗೆ ಕಳುಹಿಸಲಾಗಿತ್ತು. ರಾಷ್ಟ್ರಪತಿಗಳು ಈ ಮಸೂದೆಗಳಿಗೆ ಸಹಿ‌ಹಾಕಬಾರದು ಎಂದು‌ ವಿರೋಧ ಪಕ್ಷಗಳು ಒತ್ತಾಯಿಸಿದ್ದವು. ಮಸೂದೆಯನ್ನು ವಿರೋಧಿಸಿ ದೇಶಾದ್ಯಂತ ಪ್ರತಿಭಟನೆಗಳು ಎದ್ದಿದ್ದವು. ಮಸೂದೆಯನ್ನು ಮರು ಪರಿಷ್ಕರಣೆಗಾಗಿ  ಸಂಸತ್ತಿಗೆ ಮರಳಿಸುವ ಅಧಿಕಾರ ಇರುವ ಹೊರತಾಗಿಯೂ‌ ರಾಷ್ಟ್ರಪತಿಗಳು ಮಸೂದೆಗೆ ಅಂಕಿತ ಹಾಕಿದ್ದಾರೆ.

- Advertisement -

ಕಾನೂನಿಗೆ ವಿರುದ್ಧವಾಗಿ ಮಸೂದೆಗಳನ್ನು ಧ್ವನಿಮತದ ಮೂಲಕ ಅಂಗೀಕರಿಸಲಾಗಿದೆ ಎಂಬುದಾಗಿ ಪ್ರತಿಪಕ್ಷಗಳು ಆರೋಪಿಸಿದ್ದವು.



Join Whatsapp