‘ಕನ್ನಡ ಮಾಧ್ಯಮಗಳು ದ್ವೇಷ ಭಾಷಣಗಳಿಗೆ ಪೂರಕ ವಾತಾವರಣ ಸೃಷ್ಟಿಸುತ್ತಿದೆ’

Prasthutha|

ಸಾಮಾಜಿಕ ಚಿಂತಕರ ತಂಡದ ವರದಿ

- Advertisement -

ಮುಂಬೈ: ಪೌರತ್ವ ವಿರೋಧಿ (ತಿದ್ದುಪಡಿ) ಕಾಯ್ದೆಯ ಪ್ರತಿಭಟನೆ ಮತ್ತು ಕೋವಿಡ್-19 ನಂತರದ ದ್ವೇಷ ಭಾಷಣಗಳ ವಿರುದ್ಧ ವಕೀಲರು, ಸಂಶೋಧಕರು, ಕಾರ್ಯಕರ್ತರು, ವಿದ್ಯಾರ್ಥಿಗಳು ಮತ್ತು ವೃತ್ತಿಪರರನ್ನು ಒಳಗೊಂಡು ಸಾಮೂಹಿಕ ಅಭಿಯಾನಕಾರರು ಕನ್ನಡ ಮಾಧ್ಯಮಗಳ ಕೋಮು ಪ್ರಚೋದನಾತ್ಮಕ ವರದಿಗಳನ್ನು ಹಾಗೂ ದ್ವೇಷ ಭಾಷಣಗಳನ್ನು ಬಿತ್ತರಿಸಿರುವ ಕುರಿತು ಬೆಟ್ಟು ಮಾಡಿವೆ.

188 ಪುಟಗಳ ವಿವರವಾದ ವರದಿಯಲ್ಲಿ, ಕೋಮು ಉದ್ವೇಗವನ್ನು ಹೆಚ್ಚಿಸಲು ಮತ್ತು ದೇಶದಲ್ಲಿ ದ್ವೇಷದ ಭಾಷಣವನ್ನು ಉತ್ತೇಜಿಸಲು ಬಳಸಲಾದ ವಿಭಿನ್ನ ಘಟನೆಗಳನ್ನು ಈ ವರದಿಯಲ್ಲಿ ಉಲ್ಲೇಖಿಸಲಾಗಿದೆ.

- Advertisement -

‘ದಿ ವೇಜಸ್ ಆಫ್ ಹೇಟ್: ಜರ್ನಲಿಸಂ ಇನ್ ಡಾರ್ಕ್ ಟೈಮ್ಸ್’ ಎಂಬ ಶೀರ್ಷಿಕೆಯ ವರದಿಯು ಕನ್ನಡ ಚಾನೆಲ್‌ಗಳು ಮತ್ತು ಪತ್ರಿಕೆಗಳನ್ನು ವಿಶ್ಲೇಷಿಸಿದ್ದು, ಅವುಗಳ ಆದಾಯದ ಮಾದರಿ, ಮಾಲೀಕತ್ವ ಮತ್ತು ಅವರ ರಾಜಕೀಯ ಸಿದ್ಧಾಂತವನ್ನು ಅಧ್ಯಯನ ಮಾಡಿದೆ. ಟಿವಿ 9 ಕನ್ನಡ, ಸುವರ್ಣ ನ್ಯೂಸ್, ನ್ಯೂಸ್ 18 ಕನ್ನಡ, ದಿಗ್ವಿಜಯ ನ್ಯೂಸ್, ಪಬ್ಲಿಕ್ ಟಿವಿ, ಕಸ್ತೂರಿ ನ್ಯೂಸ್, ಬಿಟಿವಿ, ಟಿವಿ 5 ಮತ್ತು ರಾಜ್ ನ್ಯೂಸ್‌ನಂತಹ 9 ಟಿವಿ ಚಾನೆಲ್‌ಗಳು ಮತ್ತು ಏಳು ಕನ್ನಡ ದಿನ ಪತ್ರಿಕೆಗಳ ವರದಿಗಳನ್ನು ವರದಿಯು ಸೂಕ್ಷ್ಮವಾಗಿ ವಿಶ್ಲೇಷಿಸಿದೆ.

ಮುಖ್ಯವಾಗಿ ಟಿವಿ ಚಾನೆಲ್‌ಗಳು, ಕೊರೋನ ವೈರಸ್ ಆರಂಭಿಕ ಹಂತದಲ್ಲಿ ಮುಸ್ಲಿಮರನ್ನು ಗುರಿಯಾಗಿಸಿ ಸೋಂಕು ಹರಡುವವರೆಂಬಂತೆ ಬಿಂಬಿಸಲಾಗಿದ್ದು, ಸಮುದಾಯದ ಕುರಿತು ದ್ವೇಣ ಭಾವನೆಯನ್ನು ಬಿತ್ತಿದವು. ಸಿಎಎ ವಿರೋಧಿ ಹೋರಾಟಗಳನ್ನು ಸಂವಿಧಾನ ವಿರೋಧಿ ಎಂಬಂತೆಯೂ ಹೋರಾಟಗಾರರನ್ನು ದೇಶದ್ರೋಹಿಗಳೆಂಬಂತೆಯೂ ಬಿಂಬಿಸಲಾಯ್ತು ಎಂಬುದಾಗಿ ವರದಿಯು ತಿಳಿಸಿದೆ.

Join Whatsapp