ಗರ್ಭಿಣಿಯರು ಕೂಡ ಕೋವಿಡ್ ಲಸಿಕೆ ಪಡೆಯಬಹುದು: ಆರೋಗ್ಯ ಸಚಿವಾಲಯ

Prasthutha|

ಹೊಸದಿಲ್ಲಿ: ಗರ್ಭಿಣಿಯರು ಕೂಡ ಕೋವಿಡ್ ಲಸಿಕೆ ಪಡೆಯಬಹುದು ಎಂದು ಕೇಂದ್ರ ಆರೋಗ್ಯ ಸಚಿವಾಲಯ ಹೇಳಿದೆ. ಕೇಂದ್ರ ಆರೋಗ್ಯ ಸಚಿವಾಲಯದ ಪರವಾಗಿ ಕರೆಯಲಾದ ಪತ್ರಿಕಾಗೋಷ್ಠಿಯಲ್ಲಿ ಐಸಿಎಂಆರ್ ಮಹಾನಿರ್ದೇಶಕ ಡಾ.ಎಸ್.ಎಸ್. ಬಲರಾಮ್ ಭಾರ್ಗವ ಈ ಬಗ್ಗೆ ಮಾಹಿತಿ ನೀಡಿದ್ದಾರೆ.

- Advertisement -

ಗರ್ಭಿಣಿ ಮಹಿಳೆಯರಿಗೆ ಲಸಿಕೆ ನೀಡಬಹುದೆಂದು ಸೂಚಿಸುವ ಮಾರ್ಗಸೂಚಿಯನ್ನು ಶೀಘ್ರದಲ್ಲೇ ಬಿಡುಗಡೆ ಮಾಡಲಾಗುವುದು. ಗರ್ಭಿಣಿ ಮಹಿಳೆಯರಿಗೆ ಕೋವಿಡ್ ಲಸಿಕೆ ಪರಿಣಾಮಕಾರಿಯಾಗಿದ್ದು, ತಕ್ಷಣ ಅದನ್ನು ಪಡೆಯಬೇಕು ಎಂದು ಅವರು ಹೇಳಿದರು. ಅಗತ್ಯವಾದ ಡೇಟಾ ಲಭಿಸುವವರೆಗೆ ಮಕ್ಕಳಿಗೆ ಕೋವಿಡ್ ಲಸಿಕೆ ನೀಡುವ ಬಗ್ಗೆ ನಿರ್ಧಾರ ತೆಗೆದುಕೊಳ್ಳಲು ಸಾಧ್ಯವಿಲ್ಲ ಎಂದು ಅವರು ಹೇಳಿದರು.

ಆರೋಗ್ಯ ಕ್ಷೇತ್ರದಲ್ಲಿ ಈ ಬಗ್ಗೆ ಚರ್ಚೆಗಳು ನಡೆಯುತ್ತಿವೆ. ಶಿಶುಗಳಿಗೆ ಲಸಿಕೆ ನೀಡಬೇಕೆ ಎಂಬ ಬಗ್ಗೆಯೂ ಸ್ಪಷ್ಟತೆ ಇಲ್ಲ. ಮಕ್ಕಳಿಗೆ ಸಂಬಂಧಿಸಿದ ಡೇಟಾ ಲಭ್ಯವಾಗುವವರೆಗೆ ಇದನ್ನು ಪರಿಗಣಿಸಲಾಗುವುದಿಲ್ಲ.



Join Whatsapp