ಉಡುಪಿ: ನೇಜಾರಿನಲ್ಲಿ ಒಂದೇ ಕುಟುಂಬದ ನಾಲ್ವರ ಹತ್ಯೆ ಪ್ರಕರಣದ ಆರೋಪಿ ಪ್ರವೀಣ್ ಚೌಗಲೆ ಜಾಮೀನಿಗೆ ಅರ್ಜಿ ಸಲ್ಲಿಸಿದ್ದಾರೆ.
ಆತನ ಪರ ವಕೀಲರಾಗಿ ಕೆ.ಎಸ್.ಎನ್ ರಾಜೇಶ್ ವಾದಮಂಡನೆ ಮಾಡಿದ್ದು, ನ್ಯಾ.ದಿನೇಶ್ ಹೆಗ್ಡೆ ವಿಚಾರಣೆ ಕೈಗೆತ್ತಿಕೊಂಡಿದ್ದು ಆಕ್ಷೇಪಣೆ ಸಲ್ಲಿಸಲು ಸರ್ಕಾರಿ ಅಭಿಯೋಜಕರಿಗೆ ಡಿ. 20 ರಂದು ನೋಟಿಸ್ ನೀಡಲಾಗಿದೆ.
ಆರೋಪಿ ಇದೀಗ ಪರಪ್ಪನ ಅಗ್ರಹಾರ ಸೆರೆಮನೆಯಲ್ಲಿದ್ದು ಡಿಸೆಂಬರ್ 18 ರವರೆಗೆ ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ.