ಪ್ರವೀಣ್ ನೆಟ್ಟಾರು ಹತ್ಯೆ: ಆಸ್ಪತ್ರೆಯೆಡೆಗೆ ಸುಳಿಯದ ಶಾಸಕರು, ಸಚಿವರ ವಿರುದ್ಧ ಹರಿಹಾಯ್ದ ಕುಟುಂಬಸ್ಥರು

Prasthutha|

►►ಇವೆಲ್ಲವೂ ರಾಜಕೀಯದಾಟ, ಹಿಂದೂ ಸತ್ತರೆ ಬಿಜೆಪಿಗೆ ಹೆಚ್ಚು ಓಟು ಸಿಗುತ್ತೆ : ಕಿಡಿಕಾರಿದ ಸ್ಥಳೀಯರು

- Advertisement -

ಪುತ್ತೂರು: ನಿನ್ನೆ ಹತ್ಯೆಯಾದ ಬಿಜೆಪಿ ಯುವ ಮೋರ್ಛಾ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಅಂತಿಮ ಯಾತ್ರೆಗೆ ಸಿದ್ಧತೆ ನಡೆಸುತ್ತಿದ್ದ ವೇಳೆಯ ಪ್ರವೀಣ್ ಕುಟುಂಬಸ್ಥರು ನೆರೆದಿದ್ದ ಬಿಜೆಪಿ ಸ್ಥಳೀಯ ಮುಖಡರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಪ್ರಸಂಗ ಬುಧವಾರ ಬೆಳಗ್ಗೆ ಪುತ್ತೂರು ಆಸ್ಪತ್ರೆ ಬಳಿ ನಡೆಯಿತು.

ನಿನ್ನೆ ದುಷ್ಕರ್ಮಿಗಳಿಂದ ಹತ್ಯೆಯಾದ ಬಿಜೆಪಿ ಯುವ ಮೋರ್ಚಾ ಮುಖಂಡ ಪ್ರವೀಣ್ ನೆಟ್ಟಾರು ಅವರ ಮೃತದೇಹವನ್ನು ನೋಡಲು ಆಸ್ಪತ್ರೆಗೆ ಬಿಜೆಪಿ ಶಾಸಕರು, ಸಚಿವರು ಆಗಮಿಸದ ಕಾರಣ ಕುಟುಂಬಸ್ಥರು, ಸ್ಥಳೀಯ ಬಿಜೆಪಿ ಕಾರ್ಯಕರ್ತರು ಹರಿಹಾಯ್ದರು.

- Advertisement -

ಮೃತದೇಹದ ಮರಣೋತ್ತರ  ಪರೀಕ್ಷೆ ನಡೆಸಿ ಕುಟುಂಬಸ್ಥರಿಗೆ ಹಸ್ತಾಂತರಿಸಲಾಯಿತು. ಬಳಿಕ ಮೃತದೇಹವನ್ನು ಸುಳ್ಯಕ್ಕೆ ಕೊಂಡೊಯ್ಯಲು ಸಿದ್ಧತೆ ಮಾಡಿಕೊಳ್ಳಲಾಗಿತ್ತು. ಈ ವೇಳೆ ಸ್ಥಳೀಯ ಬಿಜೆಪಿ ನಾಯಕರು, ಸ್ವಲ್ಪ ಹೊತ್ತು ಮೃತದೇಹವನ್ನು ಇಲ್ಲೇ ಇರಿಸಿ, ಬೆಂಗಳೂರಿನಿಂದ ಬಿಜೆಪಿ ಶಾಸಕರು ಆಗಮಿಸುತ್ತಾರೆ ಎಂದು ಮನವಿ ಮಾಡಿದರು.

ಈ ವೇಳೆ ಆಕ್ರೋಶ ವ್ಯಕ್ತಪಡಿಸಿದ ಪ್ರವೀಣ್ ಕುಟುಂಬಸ್ಥರು, ಪ್ರವೀಣ್ ಹತ್ಯೆಯಾದ ವಿಷಯ ನಿನ್ನೆ ರಾತ್ರಿಯೇ ತಿಳಿದಿದ್ದರೂ ಇದುವರೆಗೂ ಒಬ್ಬನೇ ಒಬ್ಬ ಶಾಸಕ, ಸಚಿವನ ಪತ್ತೆಯಿಲ್ಲ. ಅವರು ಬರುವವರೆಗೆ ಮೃತದೇಹ ಇಟ್ಟು ಕಾಯಲು ಆಗುವುದಿಲ್ಲ. ಅವರು ಬಂದು ಇಲ್ಲಿ ಫೋಟೋಶೂಟ್ ಮಾಡುವುದು ಬೇಡ, ಅವರದ್ದು ಡೋಂಗಿ ರಾಜಕೀಯ. ವೋಟಿಗಾಗಿ ಅವರು ನಮ್ಮನ್ನು ಕುಣಿಸುತ್ತಿದ್ದಾರೆ ಎಂದು ಕಿಡಿಕಾರಿದರು.

 ಮೃತದೇಹದೊಂದಿಗಿನ ಮೆರವಣಿಗೆಗೆ ಬಿಜೆಪಿ ಸ್ಥಳೀಯ ಜನಪ್ರತಿನಿಧಿಗಳು ಆಗಮಿಸುವರೆಂದು ಹೇಳಿದ್ದರು. ಆದರೆ 10 ಗಂಟೆಯಾದರೂ ಇನ್ನೂ ಬಾರದ ಕಾರಣ ಕುಟುಂಬಸ್ಥರು ಆಕ್ರೋಶ ವ್ಯಕ್ತಪಡಿಸಿದರು. ಇದೆಲ್ಲವೂ ರಾಜಕೀಯದಾಟ, ಹಿಂದೂ ಸತ್ತರೆ ಬಿಜೆಪಿಗೆ ಹೆಚ್ಚು ಓಟು ಸಿಗುತ್ತೆ  ಎಂದು ಬಿಜಿಪಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಹಿಂದೂ ಸತ್ತರೆ ಹಾಗೇನೇ. ಹೇಳೋರೂ ಇಲ್ಲ ಕೇಳೋರೂ ಇಲ್ಲ. ಆದರೆ ಬಿಜೆಪಿ ಮಾತ್ರ ಓಟು ಹೆಚ್ಚಿಸಿಕೊಳ್ಳುತ್ತದೆ. ಇದುವ ಪಕ್ಷ, ಸಂಘಟನೆಗಾಗಿ ದುಡಿಯುವವರಿಗೆ ನೀಡುವ ಗೌರವ ಎಂದು ಕುಟುಂಬಸ್ಥರು ಅಸ್ಪತ್ರೆ ಮುಂಭಾಗ ಆಕ್ರೋಶ ವ್ಯಕ್ತ ಪಡಿಸಿದ್ದಾರೆ ಎಂದು ತಿಳಿದುಬಂದಿದೆ.

Join Whatsapp