ಮೈಸೂರು: ಆರೆಸ್ಸೆಸ್ ಅನ್ನು ನಪುಂಸಕ ಎಂದ ಕಾಂಗ್ರೆಸ್ ಟ್ವೀಟ್ ಹಾಗೂ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರ ಹೇಳಿಕೆಗೆ ಪ್ರತಿಕ್ರಯಿಸಿದ ಮೈಸೂರು ಸಂಸದ ಪ್ರತಾಪ್ ಸಿಂಹ, ನೆಹರೂ ನಪುಂಸಕ ಎಂದಿದ್ದಾರೆ.
ನಗರದಲ್ಲಿ ಮಾಧ್ಯಮದೊಂದಿಗೆ ಮಾತಾಡಿದ ಅವರು, ನೆಹರೂ ಅವರನ್ನು ಪ್ರಧಾನಿ ಮಾಡಲು ದೇಶವನ್ನು ಧರ್ಮದ ಆಧಾರದ ಮೇಲೆ ಒಡೆದ ನಪುಂಸಕ ಪಕ್ಷ ಯಾವುದು? 1962ರಲ್ಲಿ ಚೀನಾ ಯುದ್ಧದ ಸಂದರ್ಭದಲ್ಲಿ ನಮ್ಮ ಸೈನಿಕರು ಕೈಕಟ್ಟಿ ಕುಳಿತು ಕೊಳ್ಳುವಂತೆ ಮಾಡಿದ ನಂಪುಸಕ ಯಾರು? ಲಡಾಕ್ ಅನ್ನು ಚೀನಾ ಆಕ್ರಮಿಸಿ ಕೊಂಡಾಗ ಅಲ್ಲಿ ಹುಲ್ಲು ಕಡ್ಡಿಯೂ ಬೆಳೆಯಲ್ಲ ಎಂದು ಬೊಳು ತಲೆ ಸವರಿಕೊಂಡ ನಪುಂಸಕ ಯಾರು? ಪಾಕ್ ಆಕ್ರಮಿತ ಕಾಶ್ಮಿರ ವಾಪಸ್ ಪಡೆಯದ ಸರ್ಕಾರ ಯಾರದು? ವಾಸಿಮ್ ಮಲ್ಲಿಕ್ ನಂತಹ ಭಯೋತ್ಪಾದಕನನ್ನು ಪ್ರಧಾನಿ ಕಾರ್ಯಾಲಯಕ್ಕೆ ಕರೆಸಿಕೊಂಡ ಸರ್ಕಾರ ಯಾವುದು ಎಂದೆಲ್ಲಾ ಮಾಜಿ ಪ್ರಧಾನಿಗೆ ಅವಮಾನ ಮಾಡಿದ್ದಾರೆ.
ಆರೆಸ್ಸೆಸ್ ನ ರಾಜಕೀಯ ವ್ಹಿಂಗ್ ಬಿಜೆಪಿ ಎನ್ನುವುದು ಎಲ್ಲರಿಗೂ ಗೊತ್ತಿದೆ. ಮುಸ್ಲಿಮರ ವಿಚಾರದಲ್ಲಿ ಮಾತಾಡಿದರೆ ಸಿದ್ದರಾಮಯ್ಯ ಯಾಕೆ ಉತ್ತರ ಕೊಡಬೇಕು? ಮುಸ್ಲಿಮರಿಗೂ ಸಿದ್ದರಾಮಯ್ಯಗೂ ಏನೂ ಸಂಬಂಧ ?ಎಂದು ಪ್ರಶ್ನಿಸಿದ ಪ್ರತಾಪ್ ಸಿಂಹ, ಇಟಲಿ ಮೂಲದ ಸೋನಿಯಾ ಗಾಂಧಿಯ ಕಾಂಗ್ರೆಸ್ ಬಿಟ್ಟು ದ್ರಾವಿಡನ್ ಮೂಲದ ದೇವೇಗೌಡರ ಪಕ್ಷವನ್ನು ವಾಪಸ್ ಸೇರಲಿ. ಸಿದ್ದರಾಮಯ್ಯಗೆ ಪ್ರಚಾರಬೇಕು. ಅದಕ್ಕಾಗಿ ಕೀಳು ಮಟ್ಟದ ಹೇಳಿಕೆ ನೀಡುತ್ತಿದ್ದಾರೆ. ಆದರೆ, ಅವರು ಇನ್ನೂ ಯಾವತ್ತೂ ಸಿಎಂ ಆಗಲ್ಲ ಎಂದು ಹೇಳಿದರು