ಮಂಗಳೂರು ಬೀಚ್ ನಲ್ಲಿ ಈಜಾಡುತ್ತಿದ್ದ ಮೈಸೂರಿನ ಇಬ್ಬರು ಸಮುದ್ರಪಾಲು

Prasthutha|

ಮಂಗಳೂರು: ಈಜಾಡುತ್ತಿದ್ದ ಇಬ್ಬರು ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ಪಣಂಬೂರು ಬೀಚ್ ನಲ್ಲಿ ಇಂದು ಬೆಳಗ್ಗೆ ನಡೆದಿದೆ.

- Advertisement -

ಮೈಸೂರು ಜಯನಗರ ನಿವಾಸಿಗಳಾದ ದಿವಾಕರ ಆರಾಧ್ಯ(45) ಮತ್ತು ನಿಂಗಪ್ಪ(60) ಮೃತಪಟ್ಟವರು ಎಂದು ಗುರುತಿಸಲಾಗಿದೆ.

ಮೈಸೂರಿನ ಅಗ್ರಹಾರದಲ್ಲಿರುವ ಫುಡ್ ಆ್ಯಂಡ್ ಬೇವರೇಜಸ್ ಕಾರ್ಖಾನೆ ನಡೆಸುತ್ತಿದ್ದ ದಿವಾಕರ ಆರಾಧ್ಯ ಅವರು ಇತರರೊಂದಿಗೆ ನಗರದಲ್ಲಿ ಮೇ 27ರಿಂದ 29ವರೆಗೆ ನಡೆದ ಹಲಸು ಮೇಳದಲ್ಲಿ ಭಾಗವಹಿಸಲು ಬಂದಿದ್ದು, ನಿನ್ನೆ ಸಂಜೆಯವರೆಗೆ ಹಲಸು ಮೇಳದಲ್ಲಿ ವ್ಯಾಪಾರ ಮಾಡಿದ್ದ ಇವರು ಇಂದು ಮುಂಜಾನೆ 7 ಗಂಟೆಗೆ ಪಣಂಬೂರು ಬೀಚ್​ ಗೆ ತೆರಳಿದ್ದರು.

- Advertisement -

ಇವರೆಲ್ಲರೂ ಸಮುದ್ರದಲ್ಲಿ ಮೋಜು ಮಾಡುವ ವೇಳೆ ಅಲೆಗಳ ಸೆಳೆತಕ್ಕೆ ಸಿಲುಕಿದ್ದು, ದಿವಾಕರ ಆರಾಧ್ಯ   ಹಾಗೂ ನಿಂಗಪ್ಪ   ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದು, ಇನ್ನಿಬ್ಬರನ್ನು ರಕ್ಷಿಸಲಾಗಿದೆ. ಈ ಬಗ್ಗೆ ಪಣಂಬೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Join Whatsapp