ಪ್ರಸ್ತುತ ವರದಿ ಇಂಪ್ಯಾಕ್ಟ್ | ಪದ್ಮಶ್ರೀ ಹಾಜಬ್ಬರನ್ನು ಕರೆಸಿ ಮಾತುಕತೆ ನಡೆಸಿದ ಉಸ್ತುವಾರಿ ಸಚಿವ

Prasthutha|

ಮಂಗಳೂರು: ಇಂದು ಮಂಗಳೂರಿನಲ್ಲಿ ನಡೆದ ಜಿಲ್ಲಾಡಳಿತದ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮದಲ್ಲಿ ಪದ್ಮಶ್ರೀ ಪುರಸ್ಕೃತ ‘ಅಕ್ಷರ ಸಂತ’ ಹರೇಕಳ ಹಾಜಬ್ಬ ಅವರನ್ನು ನಿರ್ಲಕ್ಷಿಸಿದ್ದ ಬಗ್ಗೆ ಪ್ರಸ್ತುತ ನ್ಯೂಸ್ ವರದಿ ಮಾಡಿತ್ತು. ಪ್ರಸ್ತುತ ನ್ಯೂಸ್ ವರದಿ ಫಲಶೃತಿಯಾಗಿದ್ದು, ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಅವರು ಹಾಜಬ್ಬರನ್ನು ಕರೆಸಿಕೊಂಡು ಮಾತುಕತೆ ನಡೆಸಿದ್ದಾರೆ.

- Advertisement -

ಈ ಕುರಿತು ಫೇಸ್’ಬುಕ್ ನಲ್ಲಿ ಮಾಹಿತಿ ಹಂಚಿಕೊಂಡಿರುವ ದಿನೇಶ್ ಗುಂಡೂರಾವ್, “ಇಂದು ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನಲ್ಲಿ ಶಿಕ್ಷಣ ಸಂತ, ಪದ್ಮಶ್ರೀ ಸನ್ಮಾನ್ಯ ಹರೇಕಳ ಹಾಜಬ್ಬ ಅವರನ್ನು ಭೇಟಿಯಾಗಿ, ಸಮಾಲೋಚನೆ ನಡೆಸಿ, ಅವರ ಶಿಕ್ಷಣ ಸಂಸ್ಥೆಯ ಮಾಹಿತಿ ಪಡೆದು, ಅವರ ಶಿಕ್ಷಣ ಸಂಸ್ಥೆಗೆ ಸಂಪೂರ್ಣ ಸಹಕಾರ ನೀಡುವುದಾಗಿ ಭರವಸೆ ನೀಡಿದೆನು. ಈ ಸಂದರ್ಭದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಮುಖಂಡರು ಉಪಸ್ಥಿತರಿದ್ದರು” ಎಂದು ತಿಳಿಸಿದ್ದಾರೆ.

.

- Advertisement -

Join Whatsapp