SSLC ಪರೀಕ್ಷೆಯಲ್ಲಿ ಉತ್ತಮ ಅಂಕ ಪಡೆದ ಹಿಶಾಮ್ ಅಹ್ಮದ್ ಖಾನ್ ಗೆ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮದಲ್ಲಿ ಸನ್ಮಾನ

Prasthutha|

ಮಂಗಳೂರು: 2023ರ SSLC ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸಿದ್ದ ಹಿಶಾಮ್ ಅಹ್ಮದ್ ಖಾನ್ ಅವರಿಗೆ ಪ್ರೆಸ್ಟೀಜ್ ಇಂಟರ್ನ್ಯಾಷನಲ್ ಸ್ಕೂಲ್ ಆಯೋಜಿಸಿದ್ದ 77ನೇ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು.  

- Advertisement -

ಜೆಪ್ಪಿನಮೊಗರು ಪ್ರೆಸ್ಟೀಜ್ ಇಂಟರ್ನ್ಯಾಷನಲ್ ಸ್ಕೂಲ್ ನಲ್ಲಿ ವ್ಯಾಸಂಗ ಮಾಡುತ್ತಿರುವ ಹಿಶಾಮ್, SSLC ಪರೀಕ್ಷೆಯಲ್ಲಿ 93% ಅಂಕ ಗಳಿಸಿ ಶಾಲೆಗೆ ಕೀರ್ತಿ ತಂದಿದ್ದರು.

ಅವರು ಕುಂಪಲ ನಿವಾಸಿ ಯಾಸೀನ್ ಅಹ್ಮದ್ ಖಾನ್ ಮತ್ತು ಫರ್ಝಾನಾ ಖಾನ್ ದಂಪತಿ ಪುತ್ರನಾಗಿದ್ದಾರೆ.

- Advertisement -

ವಿದ್ಯಾರ್ಥಿಯ ಸಾಧನೆಗೆ ಮೆಚ್ಚುಗೆ ವ್ಯಕ್ತಪಡಿಸಿರುವ ಶಾಲಾಡಳಿತ ಮಂಡಳಿ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮದಲ್ಲಿ ಸ್ಮರಣಿಕೆ ನೀಡಿ ಗೌರವಿಸಿದೆ.

Join Whatsapp