ಪಂಚರಾಜ್ಯಗಳ ಚುನಾವಣಾ ಫಲಿತಾಂಶದ ಬೆನ್ನಲ್ಲೇ ನಿವೃತ್ತಿ ಘೋಷಿಸಿದ ರಾಜಕೀಯ ಚಾಣಕ್ಯ ಪ್ರಶಾಂತ್ ಕಿಶೋರ್!

Prasthutha|

ಹೊಸದಿಲ್ಲಿ : ಪಂಚರಾಜ್ಯಗಳ ಚುನಾವಣೆ ಫಲಿತಾಂಶ ಪ್ರಕಟಗೊಂಡ ಬೆನ್ನಲ್ಲೇ ಚುನಾವಣಾ ತಂತ್ರಗಾರ ಹಾಗೂ ರಾಜಕೀಯ ಚಾಣಕ್ಯ ಪ್ರಶಾಂತ್ ಕಿಶೋರ್ ಅವರು ನಿವೃತ್ತಿ ಘೋಷಿಸಿದ್ದಾರೆ.

‘ನಾನು ಇನ್ನುಂದೆ ರಾಜಕೀಯ ಪಕ್ಷಗಳಿಗೆ ಚುನಾವಣಾ ತಂತ್ರಗಾರಿಕೆ ಹೇಳಿಕೊಡುವ ಕೆಲಸದಿಂದ ಹಿಂದೆ ಸರಿಯುತ್ತೇನೆ’ ಎಂದು ಪ್ರಶಾಂತ್ ಕಿಶೋರ್ ಹೇಳಿರುವುದಾಗಿ ಎನ್​ಡಿಟಿವಿ ವರದಿ ಮಾಡಿದೆ.

- Advertisement -

‘ನಾನು ಈಗ ಏನು ಮಾಡುತ್ತಿದ್ದೇನೋ ಅದನ್ನು ಇಲ್ಲಿಗೆ ನಿಲ್ಲಿಸುವುದು ಸೂಕ್ತ ಎನಿಸುತ್ತಿದೆ. ಇಲ್ಲಿಗೆ ಸಾಕು. ಮುಂದೆ ಜೀವನದಲ್ಲಿ ಬೇರೆ ಏನನ್ನಾದರೂ ಮಾಡುವ ಇರಾದೆ ಇದೆ. ಪಶ್ಚಿಮ ಬಂಗಾಳ ಚುನಾವಣಾ ಫಲಿತಾಂಶ ನನಗೆ ಖುಷಿ ತರಿಸಿದೆ. ಇದು ಇಲ್ಲಿಗೆ ಸಾಕು. ಈ ಕೆಲಸದಿಂದ ನಿವೃತ್ತಿ ತೆಗೆದುಕೊಳ್ಳುತ್ತೇನೆ’ ಎಂದು ಹೇಳಿದ್ದಾರೆ.

ಚುನಾವಣೆಗೆ ಮುನ್ನ ಪ್ರಶಾಂತ್ ಕಿಶೋರ್ ಅವರು ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಎರಡಂಕಿಯ ಫಲಿತಾಂಶ ದಾಟುವುದಿಲ್ಲ. ಒಂದು ವೇಳೆ ದಾಟಿದರೇ ನಾನು ನನ್ನ ಕೆಲಸದಿಂದ ಹಿಂದೆ ಸರಿಯುತ್ತೇನೆ ಎಂದು ಹೇಳಿದ್ದರು. ಇದೀಗ ಅವರ ಭವಿಷ್ಯ ನಿಜವಾಗಿದ್ದು ಅವರು ಮಾಡಿದ್ದ ಟ್ವೀಟ್ ಟ್ರೆಂಡಿಂಗ್ ಆಗಿದೆ.

- Advertisement -