ಪ್ರಶಾಂತ್ ಕಿಶೋರ್ ನಮ್ಮೊಂದಿಗೇ ಇದ್ದಾರೆ: ಕಾಂಗ್ರೆಸ್ ಗದ್ದಲದ ನಂತರ ಮಮತಾ ಬ್ಯಾನರ್ಜಿ

Prasthutha|

ನವದೆಹಲಿ: ತೃಣಮೂಲ ಕಾಂಗ್ರೆಸ್ ರಾಜಕೀಯ ತಂತ್ರಗಾರ ಪ್ರಶಾಂತ್ ಕಿಶೋರ್ ಅವರು ನಮ್ಮೊಂದಿಗೆ ಕೆಲಸ ಮಾಡುವುದನ್ನು ಮುಂದುವರಿಸುತ್ತಾರೆ ಎಂದು ಪಕ್ಷದ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಹೇಳಿದ್ದಾರೆ.

- Advertisement -

ಪ್ರಶಾಂತ್ ಕಿಶೋರ್ ಅವರ ಸಂಘಟನೆ ಐಪಿಎಸಿಯ ಸಹಾಯದಿಂದ ಬಂಗಾಳದಲ್ಲಿ ಮತ್ತೆ ಅಧಿಕಾರಕ್ಕೆ ಬಂದ ಬ್ಯಾನರ್ಜಿ ಅವರ ಈ ಹೇಳಿಕೆ, ಕಿಶೋರ್ ಅವರು ಕಾಂಗ್ರೆಸ್ ಪಕ್ಷಕ್ಕೆ ಸೇರಲು ವಿಫಲ ಪ್ರಯತ್ನ ನಡೆಸಿದ ಕೆಲವು ದಿನಗಳ ನಂತರ ಹೊರಬಿದ್ದಿದೆ.

ಪ್ರಶಾಂತ್ ಕಿಶೋರ್ ಅವರು ಕಳೆದ ವಾರ ಕಾಂಗ್ರೆಸ್ ಪಕ್ಷದಲ್ಲಿ ಮುಕ್ತ ಹಸ್ತದ ಬೇಡಿಕೆಯನ್ನು ಒಪ್ಪಿಕೊಳ್ಳದ ನಂತರ ಪಾರ್ಟಿಗೆ ಸೇರುವ ಮಾತುಕತೆ ಮುರಿದುಬಿದ್ದಿತ್ತು. ಬದಲಾಗಿ, ಕಾಂಗ್ರೆಸ್ ತನ್ನ “ಎಂಪವರ್ಡ್ ಆಕ್ಷನ್ ಗ್ರೂಪ್” ನ ಭಾಗವಾಗಿ ಪಕ್ಷಕ್ಕೆ ಸೇರಲು ಅವರಿಗೆ ಆಫರ್ ನೀಡಿತ್ತಾದರೂ, ಅದನ್ನು ಪ್ರಶಾಂತ್ ನಿರಾಕರಿಸಿದ್ದರು.

- Advertisement -

ಸುದ್ದಿಗಾರರೊಂದಿಗೆ ಮಾತನಾಡಿದ ಮಮತಾ “ತೃಣಮೂಲ ಕಾಂಗ್ರೆಸ್ ನಲ್ಲಿಯೂ ಅವರ ಪಾತ್ರದ ಬಗ್ಗೆ ಭಿನ್ನಾಭಿಪ್ರಾಯಗಳಿವೆ, ಆದರೆ ಅವರೊಂದಿಗಿನ ಒಡನಾಟವು ಚುನಾವಣಾ ತಂತ್ರಗಾರನಾಗಿ ಮುಂದುವರಿಯುತ್ತದೆ ಎಂದು ಸ್ಪಷ್ಟಪಡಿಸಲಾಗಿದೆ” ಎಂದು ಹೇಳಿದರು.

ಇತ್ತೀಚಿನ ತಿಂಗಳುಗಳಲ್ಲಿ, ಅವರು ಪ್ರತಿಸ್ಪರ್ಧಿ ಪಕ್ಷಗಳಿಂದ, ಮುಖ್ಯವಾಗಿ ಕಾಂಗ್ರೆಸ್ ನಿಂದ ಅನುಭವಿಗಳನ್ನು ತೃಣಮೂಲಕ್ಕೆ ನೇಮಕ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. 2024ರ ರಾಷ್ಟ್ರೀಯ ಚುನಾವಣೆಯಲ್ಲಿ ಬಿಜೆಪಿಯನ್ನು ಎದುರಿಸಲು ವಿರೋಧ ಪಕ್ಷಗಳ ಮೈತ್ರಿಕೂಟದ ಸಂಭಾವ್ಯ ಕೇಂದ್ರಬಿಂದುವಾಗಿ ಮಾತುಕತೆ ನಡೆಸಿದ್ದಾರೆ ಎನ್ನಲಾಗುತ್ತಿದ್ದು ಪ್ರಶಾಂತ್ ತಮ್ಮ ಪಕ್ಷದಲ್ಲೇ ಮುಂದುವರಿಯುತ್ತಾರೆ ಎಂದು ಮಮತಾ ಬ್ಯಾನರ್ಜಿ ಸ್ಪಷ್ಟಪಡಿಸಿದ್ದಾರೆ.



Join Whatsapp