ನವದೆಹಲಿ: ಸಾಮಾಜಿಕ ಹೋರಾಟಗಾರ ಮತ್ತು ವಕೀಲ ಪ್ರಶಾಂತ್ ಭೂಷಣ್ ಲಂಕಾ ದುಃಸ್ಥಿತಿಯನ್ನು ಬೊಟ್ಟು ಮಾಡಿ ದೇಶ ಇದೇ ರೀತಿ ಮುಂದುವರಿದರೆ ಭಾರತಕ್ಕೂ ಇದೇ ಸ್ಥಿತಿ ಬರಲಿದೆ ಎಂದು ಟ್ವೀಟ್ ಮೂಲಕ ಎಚ್ಚರಿಸಿದ್ದಾರೆ.
ಲಂಕಾದಲ್ಲಿ ಬೌದ್ದರಿಂದ ಹಲಾಲ್ ನಿಷೇಧ, ಕ್ರಿಶ್ಚಿಯನ್ನರ ಮೇಲೆ ತೀವ್ರಗೊಂಡ ದಾಳಿ, ಕೋಮು ಧ್ರುವೀಕರಣ, ಬೌದ್ಧ ಸನ್ಯಾಸಿಗಳಿಂದ ಮಸೀದಿ ಮೇಲೆ ದಾಳಿ, ಸಾರ್ವಜನಿಕ ಸ್ಥಳದಲ್ಲಿ ಬುರ್ಖಾ ನಿಷೇಧ, ಲಂಕಾದಲ್ಲಿ ಒಂದು ರಾಷ್ಟ್ರ ಒಂದು ಸಂವಿಧಾನ, ತಾರತಮ್ಯ ಎದುರಿಸುತ್ತಿರುವ ಮುಸ್ಲಿಮರು ಮುಂತಾದ ಶ್ರೀಲಂಕಾ ಸಂಬಂಧಿತ ವಾರ್ತೆಯ ಪೇಪರ್ ಕಟ್ ಗಳನ್ನು ಹಂಚಿಕೊಂಡು “ಕಳೆದ ಕೆಲವು ವರ್ಷಗಳಲ್ಲಿ ಶ್ರೀಲಂಕಾದ ಆಡಳಿತಗಾರರು ಏನು ಮಾಡಿದರು ಮತ್ತು ಇಂದು ಭಾರತದ ಆಡಳಿತಗಾರರು ಇಲ್ಲಿ ಏನು ಮಾಡುತ್ತಿದ್ದಾರೆ ಎಂಬುದರ ನಡುವಿನ ಹೋಲಿಕೆಯನ್ನು ನೀವು ನೋಡಬಲ್ಲಿರಾ? ಭಾರತದಲ್ಲಿನ ಪರಿಣಾಮಗಳು ಇಂದು ಶ್ರೀಲಂಕಾದಲ್ಲಿ ನಡೆಯುತ್ತಿರುವಂತೆಯೇ ಇರುತ್ತವೆಯೇ?” ಎಂದು ಎಚ್ಚರಿಸಿದ್ದಾರೆ.
ಭಾರತದ ವರ್ತಮಾನದ ವಿದ್ಯಮಾನಗಳು ಈ ಹಿಂದೆ ಲಂಕಾದಲ್ಲಿ ನಡೆದ ಇತಿಹಾಸವನ್ನೇ ನೆನಪಿಸುವಾಗ ಶ್ರೀಲಂಕಾ ದುಸ್ಥಿತಿ ಭಾರತಕ್ಕೂ ಅನ್ವಯವಾಗಲಿದೆ ಎಂದು ಅವರು ಎಚ್ಚರಿಸಿದ್ದಾರೆ.