ಪಿಎಸ್ಐ ಹಗರಣ: ಸರ್ಕಾರವನ್ನು ವಜಾಗೊಳಿಸಿ, ನ್ಯಾಯಾಂಗ ತನಿಖೆಗೆ ಆಗ್ರಹಿಸಿ ಗುಲ್ಬರ್ಗದಲ್ಲಿ ಕ್ಯಾಂಪಸ್ ಫ್ರಂಟ್’ನಿಂದ ಡಿಸಿ ಕಚೇರಿ ಚಲೋ

Prasthutha|

ಕಲಬುರಗಿ: ರಾಜ್ಯದಲ್ಲಿ ಸಂಚಲನ ಮೂಡಿಸಿರುವ ಪಿಎಸ್ಐ 545 ಹುದ್ದೆಗಳ ನೇಮಕಾತಿಯಲ್ಲಿ ನಡೆದ ಭಾರಿ ಪ್ರಮಾಣದ ಹಗರಣದಲ್ಲಿ ಸಿ.ಐ.ಡಿ ನಡೆಸುತ್ತಿರುವ ತನಿಖೆಯಲ್ಲಿ ಪಾರದರ್ಶಕತೆಯ ಬಗ್ಗೆ ಸಂಶಯವಿದ್ದು, ಈ ಹಗರಣವನ್ನು ನ್ಯಾಯಾಂಗ ತನಿಖೆಗೆ ವಹಿಸಬೇಕು ಮತ್ತು ಭ್ರಷ್ಟ ರಾಜ್ಯ ಬಿಜೆಪಿ ಸರಕಾರವನ್ನು ವಜಾಗೊಳಿಸಬೇಕೆಂದು ಆಗ್ರಹಿಸಿ ಕ್ಯಾಂಪಸ್ ಫ್ರಂಟ್ ವತಿಯಿಂದ ಗುಲ್ಬರ್ಗದ ಜಗತ್ ಸರ್ಕಲ್ ನಿಂದ ಡಿ ಸಿ ಕಚೇರಿಗೆ ಜಾಥ ನಡೆಸಿ ಪ್ರತಿಭಟಿಸಲಾಯಿತು.

- Advertisement -


ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಕ್ಯಾಂಪಸ್ ಫ್ರಂಟ್ ರಾಜ್ಯ ಕಾರ್ಯದರ್ಶಿ ಸರ್ಫರಾಝ್ ಗಂಗಾವತಿ, ಭ್ರಷ್ಟಾಚಾರವನ್ನೇ ಉಸಿರಾಡುತ್ತಿರುವ ಬಿಜೆಪಿಯ ಭ್ರಷ್ಟಾಚಾರದ ಹಗರಣದ ಸರಮಾಲೆಗಳ ಬಗ್ಗೆ ಪಾರದರ್ಶಕವಾಗಿ ನ್ಯಾಯಾಂಗ ತನಿಖೆಯಾದರೆ ಜೈಲುಗಳು ಬಿಜೆಪಿಯ ನಾಯಕರಿಂದಲೇ ತುಂಬಲಿವೆ. ನೇಮಕಾತಿಯಲ್ಲಿ ಪ್ರಾಮಾಣಿಕವಾಗಿ ಪರೀಕ್ಷೆ ಬರೆದು ಆಯ್ಕೆಯಾದವರನ್ನು ಹುದ್ದೆ ನೀಡಿ ನ್ಯಾಯ ಪಾಲಿಸಬೇಕೆಂದು ಹೇಳಿದರು.


ಇದೇ ವೇಳೆ ಮಾತನಾಡಿದ ಕ್ಯಾಂಪಸ್ ಫ್ರಂಟ್ ರಾಜ್ಯ ಸಮಿತಿ ಸದಸ್ಯ ಚಾಂದ್ ಸಲ್ಮಾನ್, ಈಗಾಗಲೇ ಬಿಜೆಪಿ ನಾಯಕಿ ದಿವ್ಯಾ ಹಾಗರಗಿ ಸೇರಿದಂತೆ ಬಿಜೆಪಿ, ಎಬಿವಿಪಿಯ ಹಲವಾರು ನಾಯಕರು ಬಂಧನಕ್ಕೊಳಪಟ್ಟಿದ್ದಾರೆ, ಸಿ.ಐ.ಡಿ ತನಿಖೆಯಿಂದ ದೊಡ್ಡ ತಿಮಿಂಗಿಲುಗಳನ್ನು ಉಳಿಸುವ ಹುನ್ನಾರ ನಡೆಯುತ್ತಿದ್ದು, ಸತ್ಯ ಬಯಲಿಗೆ ಬರಬೇಕಾದರೆ ಈ ಪ್ರಕರಣವನ್ನು ನ್ಯಾಯಾಂಗ ತನಿಖೆ ನಡೆಯಬೇಕೆಂದು ಒತ್ತಾಯಿಸಿದರು.

- Advertisement -


ಸಂದರ್ಭದಲ್ಲಿ ಕ್ಯಾಂಪಸ್ ಫ್ರಂಟ್ ಗುಲ್ಬರ್ಗ ಜಿಲ್ಲಾಧ್ಯಕ್ಷರಾದ ಶೋಯೆಬ್ ಇಲಿಯಾ, ಜಿಲ್ಲಾ ಕಾರ್ಯದರ್ಶಿ ವಜಾಹತ್, ಜಿಲ್ಲಾ ಸಮಿತಿ ಸದಸ್ಯರಾದ ತಾಹ, ವಾಜಿದ್ ಮತ್ತು ಇತರೆ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

Join Whatsapp