NDTV ಆಡಳಿತ ಮಂಡಳಿಗೆ ಪ್ರಣಯ್ ರಾಯ್, ರಾಧಿಕಾ ರಾಯ್ ರಾಜೀನಾಮೆ

Prasthutha|

ಹೊಸದಿಲ್ಲಿ: ನ್ಯೂಡೆಲ್ಲಿ ಟೆಲಿವಿಷನ್ (NDTV) ಸಂಸ್ಥಾಪಕ ಮತ್ತು ಪ್ರವರ್ತಕರಾದ ಪ್ರಣಯ್ ರಾಯ್ ಹಾಗೂ ಅವರ ಪತ್ನಿ ರಾಧಿಕಾ ರಾಯ್ ಆರ್‌ಆರ್‌ಪಿಆರ್ ಹೋಲ್ಡಿಂಗ್ ಪ್ರೈವೇಟ್ ಲಿಮಿಟೆಡ್‌ನ ನಿರ್ದೇಶಕರ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ. 

- Advertisement -

ಎನ್‌ಡಿಟಿವಿಯ ಪ್ರವರ್ತಕ ಸಮೂಹ ಸಂಸ್ಥೆಯಾದ ಆರ್‌ಆರ್‌ಪಿಆರ್ ಹೋಲ್ಡಿಂಗ್, ಎನ್‌ಡಿಟಿವಿಯಲ್ಲಿ ಶೇಕಡಾ 29.18 ಪಾಲನ್ನು ಹೊಂದಿದೆ, ಇದನ್ನು ಉದ್ಯಮಿ ಗೌತಮ್ ಅದಾನಿ ಒಡೆತನದ ಅದಾನಿ ಸಮೂಹವು ಸ್ವಾಧೀನಪಡಿಸಿಕೊಂಡಿದೆ.


ನವೆಂಬರ್ 29ರಿಂದ ಜಾರಿಗೆ ಬರುವಂತೆ ಆರ್‌ಆರ್‌ಪಿಆರ್ ಹೋಲ್ಡಿಂಗ್ ಪ್ರೈವೇಟ್ ಲಿಮಿಟೆಡ್‍ ನ ಆಡಳಿತ ಮಂಡಳಿಗೆ ಇಬ್ಬರೂ ರಾಜೀನಾಮೆ ನೀಡಿದ್ದಾರೆ ಎಂದು ನಿಯಂತ್ರಣ ಸಂಸ್ಥೆಗೆ ಸಲ್ಲಿಸಿದ ಹೇಳಿಕೆಯಲ್ಲಿ ಬಹಿರಂಗಪಡಿಸಲಾಗಿದೆ.

- Advertisement -


ಮಂಗಳವಾರ ನಡೆದ ಆರ್‌ಆರ್‌ಪಿಆರ್ ಹೋಲ್ಡಿಂಗ್ ಪ್ರೈವೇಟ್ ಲಿಮಿಟೆಡ್ ಅಡಳಿತ ಮಂಡಳಿ ಸಭೆಯಲ್ಲಿ ಸುದೀಪ್ತ ಭಟ್ಟಾಚಾರ್ಯ, ಸಂಜಯ್ ಪುಗಾಲಿಯಾ ಮತ್ತು ಸೆಂಥಿಲ್ ಸಿನ್ನಿಯಾ ಚೆಂಗಲ್ವಾ ರಯನ್ ಅವರನ್ನು ತಕ್ಷಣದಿಂದ ಜಾರಿಗೆ ಬರುವಂತೆ RRPRH ಆಡಳಿತ ಮಂಡಳಿಗೆ ನೇಮಕ ಮಾಡಲಾಗಿದೆ ಎಂದು ಮುಂಬೈ ಸ್ಟಾಕ್ ಎಕ್ಸ್ ಚೇಂಜ್ ಗೆ ಮಾಹಿತಿ ನೀಡಲಾಗಿದೆ.


ಆರ್‌ಆರ್‌ಪಿಆರ್ ಹೋಲ್ಡಿಂಗ್‌ ಪ್ರವರ್ತಕ ಗುಂಪು ಹೊಂದಿದ್ದ ಶೇಕಡ 29.18ರಷ್ಟು ಷೇರನ್ನು ಗೌತಮ್ ಅದಾನಿ ನೇತೃತ್ವದ ಅದಾನಿ ಸಮೂಹ ಖರೀದಿಸಿದೆ.ಮುಂದಿನ ಶೇಕಡಾ 26 ರಷ್ಟು ರಾಜ್ಯ ಪಾಲನ್ನು ಪಡೆಯಲು ಮುಕ್ತ ಪ್ರಸ್ತಾಪ ಮಾಡಲು ನಿರ್ಧರಿಸಿದೆ.

Join Whatsapp