ಚಾಲಕ ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿ ಹೊಡೆದ ಕಾರು: ಐವರು ಗಂಭೀರ

Prasthutha|

ಧಾರವಾಡ: ಚಾಲಕನ ನಿಯಂತ್ರಣ ತಪ್ಪಿ ಗೋವಾ ಕಾರವೊಂದು ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ ಐವರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಧಾರವಾಡದ ಚಿಕ್ಕಮಲಿಗವಾಡ ಕ್ರಾಸ್‌ ನ ಪೆಪ್ಪಿ ಕಂಪನಿ ಬಳಿ ಮಂಗಳವಾರ ತಡ ಸಂಜೆ ನಡೆದಿದೆ.

ಧಾರವಾಡ ಕೃಷಿ ವಿಶ್ವವಿದ್ಯಾಲಯ ಮಾರ್ಗವಾಗಿ ನಗರ ಕಡೆ ಬರುತ್ತಿದ್ದ ಗೋವಾ ನೋಂದಣಿಯ ಕಾರು ಪೆಪ್ಸ್ ಕಂಪನಿಯ ಹತ್ತಿರ ಬರುತ್ತಿದ್ದಂತೆ ಚಾಲಕನ ನಿಯಂತ್ರಣ ತಪ್ಪಿ ಮರಕ್ಕೆ ರಭಸವಾಗಿ ಡಿಕ್ಕಿ ಹೊಡೆದಿದೆ. ಇದರಿಂದಾಗಿ ಕಾರಿನಲ್ಲಿದ್ದ ವೀಣಾ ಸಾಣಿಕೊಪ್ಪ, ಮಹಾನಂದಾ ಕೊಣ್ಣೂರ, ಚಂದ್ರಕಾಂತ ಕೊಣ್ಣೂರ, ಯಶ್ ಸಾಣಿಕೊಪ್ಪ, ಸತೀಶ್ ಸಾಣಿಕೊಪ್ಪ ಎನ್ನುವವರಿಗೆ ಗಂಭೀರವಾಗಿ ಗಾಯಗೊಂಡಿದ್ದಾರೆ.

- Advertisement -

ಸ್ಥಳೀಯರ ಮಾಹಿತಿ ಮೇರೆಗೆ ಘಟನಾ ಸ್ಥಳಕ್ಕೆ ಭೇಟಿ ನೀಡಿದ ಧಾರವಾಡ ಸಂಚಾರಿ ಠಾಣೆಯ ಪೊಲೀಸರು ಗಾಯಾಳುಗಳನ್ನು ಹೊರತೆಗೆದು ಜಿಲ್ಲಾಸ್ಪತ್ರೆಗೆ ರವಾನೆ ಮಾಡಿದ್ದಾರೆ. ಈ ಕುರಿತು ಧಾರವಾಡ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -