ಪ್ರಮೋದ್ ಮುತಾಲಿಕ್ ಗಡಿಪಾರು ಮಾಡುವಂತೆ ಪೋಲಿಸ್ ಆಯುಕ್ತರಿಗೆ ಮನವಿ

Prasthutha|

ಪೊಲೀಸ್ ಆಯುಕ್ತರು ಹೇಳಿದ್ದೇನು?

- Advertisement -


ಹುಬ್ಬಳ್ಳಿ: ಪ್ರಚೋದನಕಾರಿ ಹೇಳಿಕೆ ನೀಡಿರುವ ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಅವರನ್ನು ಗಡಿಪಾರಿಗೆ ಆಗ್ರಹಿಸಿ ಮುಸ್ಲಿಂ ಮುಖಂಡರು ಮನವಿ ಸಲ್ಲಿಸಿದ್ದಾರೆ.
ಹುಬ್ಬಳ್ಳಿಯ ಈದ್ಗಾ ಮೈದಾನದ ಗಣೇಶ ವಿಸರ್ಜನೆ ವೇಳೆ ಮುತಾಲಿಕ್ ಮಸೀದಿಗಳಲ್ಲೂ ಗಣೇಶ ಪ್ರತಿಷ್ಠಾಪನೆ ಮಾಡ್ತೀವಿ ಎಂಬ ಹೇಳಿಕೆ ನೀಡಿದ್ದರು. ಮುತಾಲಿಕ್ ವಿರುದ್ಧ ಉಪನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಇದಕ್ಕೆ ಸಂಬಂಧಿಸಿ, ಇದೀಗ ಆಯುಕ್ತರಿಗೆ ಮನವಿ ಸಲ್ಲಿದ್ದಾರೆ.


ಇನ್ನು ಹುಬ್ಬಳ್ಳಿಯಲ್ಲಿ ಈ ಕುರಿತು ಮಾತನಾಡಿದ ಪೊಲೀಸ್ ಆಯುಕ್ತೆ ರೇಣುಕಾ ಸುಕುಮಾರ ‘ಮುತಾಲಿಕ್ ಹೇಳಿಕೆ ಕುರಿತಂತೆ ಅಂಜುಮನ್ ಹಾಗೂ ಮುಸ್ಲಿಂ ಬಾಂಧವರಿಂದ ದೂರು ನೀಡಲಾಗಿದೆ. ದೂರಿನನ್ವಯ ಕಾನೂನು ಕ್ರಮ ಜರುಗಿಸಲಾಗುವುದು. ಈ ಬಗ್ಗೆ ಜಿಲ್ಲಾಧಿಕಾರಿಗಳ ಜೊತೆ ಚರ್ಚೆ ಮಾಡಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು. ಮತ್ತು ಪ್ರಚೋದನಕಾರಿ ಹೇಳಿಕೆ ಹಿನ್ನೆಲೆ ನಿನ್ನೆಯೇ ಸ್ವಯಂಪ್ರೇರಿತ ದೂರು ದಾಖಲಿಸಿಕೊಳ್ಳಲಾಗಿತ್ತು. ಬಳಿಕ ಅಂಜುಮನ್ ಸಂಸ್ಥೆಯಿಂದಲೂ ಸಹ ದೂರು ನೀಡಲಾಗಿದೆ. ಮುತಾಲಿಕ್ ಅವರನ್ನ ಗಡಿಪಾರು ಮಾಡುವಂತೆ ಮನವಿ ಕೊಡಲಾಗಿದೆ. ಈ ಬಗ್ಗೆ ಚರ್ಚಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.



Join Whatsapp