ಗದಗ ಜುಮ್ಮಾ ಮಸೀದಿ ಮೂಲತಃ ವೆಂಕಟೇಶ್ವರ ದೇಗುಲ, ಈ ಬಗ್ಗೆ ಕಾನೂನು ಹೋರಾಟ ಮಾಡುತ್ತೇವೆ: ಪ್ರಮೋದ್ ಮುತಾಲಿಕ್

Prasthutha|

ಗದಗ: ನಗರದಲ್ಲಿರುವ ಜುಮ್ಮಾ ಮಸೀದಿ ಮೂಲತಃ ವೆಂಕಟೇಶ್ವರ ದೇಗುಲ. ರಾಮಮಂದಿರ ಮಾದರಿಯಲ್ಲಿ ವೆಂಕಟೇಶ್ವರ ದೇವಸ್ಥಾನ ಇದೆ. ಟಿಪ್ಪು ಸುಲ್ತಾನ್ ಅವಧಿಯಲ್ಲಿ ದೇಗುಲ ಕೆಡವಿ ಮಸೀದಿ ಆಗಿದೆ. ಇದಕ್ಕೆ ದಾಖಲೆ ಇದೆ. ಈ ಬಗ್ಗೆ ಕಾನೂನು ಹೋರಾಟ ಮಾಡುತ್ತೇವೆ ಎಂದು ಗದಗದಲ್ಲಿ ಶ್ರೀರಾಮಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಹೇಳಿಕೆ ನೀಡಿದ್ದಾರೆ.

- Advertisement -

ಮತಾಂತರ ಖಂಡಿಸಿ ಪಥಸಂಚಲನ ಸಮಾರೋಪದಲ್ಲಿ ಮಾತನಾಡಿದ ಅವರು, ನಾವು ಸೌಹಾರ್ದತೆಯಿಂದ ಇರಬೇಕಾದರೆ ನಮ್ಮ ದೇವಸ್ಥಾನ ನಮಗೆ ವಾಪಸ್ ಕೊಡಿ. ಈ ವಿಷಯ ಪ್ರಶ್ನೆ ಮಾಡಿದವರನ್ನು ಗಡಿಪಾರು ಮಾಡಿ ಎನ್ನುತ್ತಾರೆ. ಮೊದಲು ನಿಮ್ಮನ್ನು ಗಡಿಪಾರು ಮಾಡಬೇಕು ಎಂದು ಮುತಾಲಿಕ್ ವಿವಾದಾತ್ಮಕವಾಗಿ ಮಾತನಾಡಿದ್ದಾರೆ.
ಈ ಬಗ್ಗೆ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಟೀಕೆ ವ್ಯಕ್ತವಾಗಿದೆ.

Join Whatsapp