ಉತ್ತಮ ಆಹಾರ ಸುರಕ್ಷತೆಗಾಗಿ ಕೇಂದ್ರದ ಎಫ್.ಎಸ್.ಎಸ್.ಎ.ಐ ಸಹಯೋಗದಡಿ ಅಲ್ಪಾವಧಿ ಕೋರ್ಸ್ ಆರಂಭಿಸಿದ ಪ್ರಖಾರ್ ಫೌಂಡೇಷನ್

Prasthutha|

ಬೆಂಗಳೂರು: ಆಹಾರ ಸುರಕ್ಷತಾ ಕಾಯ್ದೆಯಡಿ ಆಹಾರ ಸುರಕ್ಷತೆ, ಗುಣಮಟ್ಟ ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಕೇಂದ್ರದ ಎಫ್.ಎಸ್.ಎಸ್.ಎ.ಐ ಸಹಯೋಗದಡಿ ಅಲ್ಪಾವಧಿ “ಆಹಾರ ಸುರಕ್ಷತಾ ಕೋರ್ಸ್ ಗಳನ್ನು ಪ್ರಖಾರ್ ಫೌಂಡೇಷನ್ ಆರಂಭಿಸಿದೆ.

- Advertisement -

ಆಹಾರ ಸುರಕ್ಷತೆ ಬಗ್ಗೆ ತರಬೇತಿ ಮತ್ತು ಪ್ರಮಾಣ ಪತ್ರವನ್ನು ಎಫ್.ಎಸ್.ಎಸ್.ಎ.ಐ ನಿಂದ ನೀಡಲಾಗುತ್ತಿದೆ. ಬೀದಿ ಬದಿ ವ್ಯಾಪಾರಿಗಳು, ಹಾಲು ಅಂಗಡಿ, ಹೋಟೆಲ್, ರೆಸ್ಟೋರೆಂಟ್ ಗಳು, ತರಕಾರಿ ಮತ್ತು ಮಾಂಸದ ಅಂಗಡಿಗಳು, ಆಹಾರ ಪದಾರ್ಥಗಳನ್ನು ಮಾರಾಟ ಮಾಡುವವರಿಗಾಗಿ ಈ ಕೋರ್ಸ್ ತೆರೆಯಲಾಗಿದೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪ್ರಕಾರ್ ಫೌಂಡೇಷನ್ ನ ಜಿಲ್ಲಾ ಸಂಯೋಜಕರುಗಳಾದ ಸೋಮಶೇಖರ್, ಸುಧಾಕರ್, ರಾಜ್ಯ ಯೋಜನಾ ಸಂಯೋಜಕಿ ರೇಣುಕಾ ಅಣ್ಣುರೆ, ಕೇಂದ್ರ ಸರ್ಕಾರದ ಆಹಾರ ಸುರಕ್ಷತಾ ಕಾಯ್ದೆಯಡಿ ಆಹಾರ ಪಾದಾರ್ಥಗಳ ಶುಚಿತ್ವ ಕಾಪಾಡಿಕೊಂಡು ಗುಣಮಟ್ಟದಿಂದ ಕೂಡಿದ ವಸ್ತುಗಳನ್ನು ಗ್ರಾಹಕರಿಗೆ ನೀಡುವ ಉದ್ದೇಶದಿಂದ  ಕಳೆದ ಒಂದು ತಿಂಗಳಿಂದ ಈ ಕೋರ್ಸ್ ಗಳನ್ನು ನಡೆಸಲಾಗುತ್ತಿದೆ. ಇವು ಆನ್ ಲೈನ್ ಕೋರ್ಸ್ ಗಳಾಗಿವೆ ಎಂದರು.

- Advertisement -

ಆಹಾರ ಪದಾರ್ಥಗಳ ಉದ್ದಿಮೆದಾರರನ್ನು ಒಂದೇ ಸೂರಿನಡಿಯಲ್ಲಿ ನಿಬಂಧನೆ ಮತ್ತು ಪರಿವೀಕ್ಷಣೆಗೆ ಒಳಪಡಿಸುವ, ಆಹಾರ ಮತ್ತು ಆಹಾರ ಪದಾರ್ಥಗಳ ತಯಾರಿಕೆಯಲ್ಲಿ ಬಳಕೆ ಮಾಡುವ ವಿವಿಧ ಪದಾರ್ಥಗಳ ಸುರಕ್ಷತೆ ಮತ್ತು ಗುಣಮಟ್ಟವನ್ನು ಕಾಯ್ದುಕೊಂಡು, ಮಾನವನ ಸೇವನೆಗೆ ಯೋಗ್ಯವಾದ ಆಹಾರ ಪೂರೈಸುವುದು ಈ ಕೋರ್ಸ್ ನ ಮೂಲ ಉದ್ದೇಶವಾಗಿದೆ. ಆಹಾರ ಸುರಕ್ಷತೆ ಇಲ್ಲದಿದ್ದರೆ ಅನಾರೋಗ್ಯ ತಡೆಗಟ್ಟಲು ಸಾಧ್ಯವಿಲ್ಲ. ಅದರಿಂದ ಆಹಾರ ನಿರ್ವಹಣೆ, ತಯಾರಿಕೆ ಮತ್ತು ಸಂಗ್ರಹಣೆ ಬಗ್ಗೆ ತರಬೇತಿ ನೀಡಲಾಗುತ್ತಿದೆ ಎಂದರು.

ತರಬೇತಿ ಸಂದರ್ಭದಲ್ಲಿ ಆಹಾರ ಪದಾರ್ಥಗಳ ಲೇಬಲಿಂಗ್, ಆಹಾರ ನೈರ್ಮಲ್ಯ, ಜೈವಿಕ ತಂತ್ರಜ್ಞಾನದ ನೀತಿಗಳು ಮತ್ತು ಆಹಾರ ಮತ್ತು ಸರ್ಕಾರಿ ಆಮದು ಮತ್ತು ರಫ್ತು ನಿರ್ವಹಣೆಯ ಮಾರ್ಗಸೂಚಿ ಪಾಲನೆ ಹೀಗೆ ಹಲವು ವಿಧಾನಗಳಲ್ಲಿ ಅರಿವು ಮೂಡಿಸಲಾಗುತ್ತಿದೆ. ತರಬೇತಿ ಕೋರ್ಸ್ ಗಳನ್ನು ಪ್ರಖಾರ್ ಫೌಂಡೇಷನ್ ನಡೆಸುತ್ತಿದ್ದರೂ ಎಫ್.ಎಸ್.ಎಸ್.ಎ.ಐ ಸಂಸ್ಥೆಯ ಸಿಬ್ಬಂದಿ ಕೋರ್ಸ್ ಕಲಿಯುವವರಿಗೆ ತರಬೇತಿ ನೀಡಲಿದೆ. ಆಹಾರ, ತಯಾರಿಕರು, ವಿತರಕರು ಕಡ್ಡಾಯವಾಗಿ ಆಹಾರ ಸುರಕ್ಷತಾ ತರಬೇತಿ ಪಡೆಯಬೇಕಾಗಿದೆ ಎಂದು ಹೇಳಿದರು.



Join Whatsapp