ಉಮೇಶ್ ಕತ್ತಿ ಸಮಾಧಿಗೆ ಗುಟ್ಕಾ ಪ್ಯಾಕೆಟ್ ಇಟ್ಟು ನಮನ

Prasthutha|

ಚಿಕ್ಕೋಡಿ: ಮಂಗಳವಾರ ಹೃದಯಾಘಾತದಿಂದ ನಿಧನರಾದ ಸಚಿವ ಉಮೇಶ್ ಕತ್ತಿ ಸಮಾಧಿಗೆ ಕುಟುಂಬಸ್ಥರು ಪೂಜೆ ನೆರವೇರಿಸಿ ಅಂತಿಮ ವಿಧಿ ವಿಧಾನವನ್ನು ಇಂದು ಪೂರೈಸಿದರು.

- Advertisement -

ಪುತ್ರ ನಿಖಿಲ್ ಕತ್ತಿ, ಅಳಿಯ ನಿತಿನ್ ಪ್ರಭುದೇವ ಅವರು ಸಮಾಧಿಗೆ ತೆರಳಿ ಪುರೋಹಿತರ ಮಾರ್ಗದರ್ಶನದಂತೆ ಪೂಜೆ ಸಲ್ಲಿಸಿದರು.

ಸಮಾಧಿಯ ಮೇಲೆ ಅವರ ಇಷ್ಟದ ತಿಂಡಿ, ತಿನಿಸುಗಳನ್ನು ಇಡಲಾಯಿತು. ಜೊತೆಗೆ ಸಮಾಧಿ ಮೇಲೆ ಅವರಿಗೆ ಇಷ್ಟವಾದ ಗುಟ್ಕಾ ಪ್ಯಾಕೇಟ್ ಇಟ್ಟು ನಮನ ಸಲ್ಲಿಸಲಾಯಿತು.

- Advertisement -

ನಿನ್ನೆ ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಬೆಲ್ಲದ ಬಾಗೇವಾಡಿಯಲ್ಲಿ ಅವರ ಅಂತ್ಯಕ್ರಿಯೆ ನಡೆದಿತ್ತು.

Join Whatsapp