ಬೆಂಗಳೂರು: ಇಂದು ದೇಶದ ವಿವಿಧೆಡೆ ವಂದೇ ಭಾರತ್ ರೈಲುಗಳ ಉದ್ಘಾಟನೆಯನ್ನು ನಟ ಪ್ರಕಾಶ್ ರೈ ಛೇಡಿಸಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ಒಬ್ಬ ಸ್ಟೇಷನ್ ಮಾಸ್ಟರ್ ಇದನ್ನು ಮಾಡಬಹುದು. ನಾವು ನಿಜವಾಗಿಯೂ ನಿಮ್ಮನ್ನು ಹೊತ್ತಿ ಉರಿಯುತ್ತಿರುವ ಮಣಿಪುರದಲ್ಲಿ ನೋಡಲು ಬಯಸುತ್ತೇನೆ ಎಂದು ಬರೆದುಕೊಂಡಿದ್ದಾರೆ.
ಬೆಂಗಳೂರು-ಧಾರವಾಡದ ‘ವಂದೇ ಭಾರತ್ ಎಕ್ಸ್ಪ್ರೆಸ್’ ರೈಲುಗೆ ಪ್ರಧಾನಿ ನರೇಂದ್ರ ಮೋದಿ ವರ್ಚುವಲ್ ಮೂಲಕ ಚಾಲನೆ ನೀಡಿದ್ದಾರೆ. ಇದೇ ವೇಳೆ ಭೋಪಾಲ್-ಇಂದೋರ್, ಭೋಪಾಲ್-ಜಬಲ್ಪುರ, ರಾಂಚಿ-ಪಾಟ್ನಾ ಮತ್ತು ಮಡಗಾಂವ್- ಮುಂಬಯಿ ಮಾರ್ಗದ ವಂದೇ ಭಾರತ್ ರೈಲುಗಳಿಗೆ ಪ್ರಧಾನಿಯವರಿಂದ ಚಾಲನೆ ದೊರೆಯಿತು.
A Station Master can do it .. We really want to see you in #Manipur sirji #ManipurBurning 🙏🏿🙏🏿🙏🏿#justasking https://t.co/7dcAeIhnrX
— Prakash Raj (@prakashraaj) June 26, 2023