ಹಿಂದಿಯಲ್ಲಿ ಮಾತನಾಡಿದ್ದಕ್ಕೆ ಪ್ರಕಾಶ್ ರೈ ಕಪಾಳ ಮೋಕ್ಷ: ದ್ರಾವಿಡರ ಮೆಚ್ಚುಗೆ

Prasthutha|

ನವದೆಹಲಿ: ನಟ ಸೂರ್ಯ ಅಭಿನಯದ’ಜೈ ಭೀಮ್’ ಚಿತ್ರದಲ್ಲಿ ಮತ್ತೆ ಹಿಂದಿ ಹೇರಿಕೆ ವಿರುದ್ಧ ಪ್ರತಿರೋಧ ವ್ಯಕ್ತವಾಗಿದೆ.

- Advertisement -


ಜೈ ಭೀಮ್ ಸಿನಿಮಾದ ಒಂದು ದೃಶ್ಯದ ಬಗ್ಗೆ ಭಾರೀ ಚರ್ಚೆ ನಡೆಯುತ್ತಿದೆ. ಈ ಚಿತ್ರದ ದೃಶ್ಯದಲ್ಲಿ ಪ್ರಕಾಶ್ ರಾಜ್ ಬಳಿ ಬರುವ ಅಟೆಂಡರ್ ಓರ್ವ ಹಿಂದಿಯಲ್ಲಿ ಮಾತನಾಡುತ್ತಾನೆ. ಈ ವೇಳೆ ಪ್ರಕಾಶ್ ರೈ ಕೆನ್ನೆಗೆ ಬಾರಿಸಿ ತಮಿಳಿನಲ್ಲಿ ಮಾತನಾಡುವಂತೆ ಸೂಚಿಸುತ್ತಾರೆ. ಯಾಕೆ ನನಗೆ ಹೊಡೆಯುತ್ತೀರಿ ಎಂದು ಆತ ತಮಿಳಿನಲ್ಲೇ ಪ್ರಕಾಶ್ ರೈಗೆ ಪ್ರಶ್ನಿಸುತ್ತಾನೆ. ಆಗ ‘ತಮಿಳಿನಲ್ಲಿ ಮಾತಾಡು’ ಎಂದು ಪ್ರಕಾಶ್ ರೈ ಉತ್ತರಿಸುತ್ತಾರೆ.


ದೇಶದಲ್ಲಿ ಹಿಂದಿ ಹೇರಿಕೆ ವಿರುದ್ಧ ಮೊದಲಿನಿಂದಲೂ ಗಟ್ಟಿಯಾಗಿ ಪ್ರತಿರೋಧ ಒಡ್ಡುತ್ತಿರುವುದು ತಮಿಳುನಾಡು. ದ್ರಾವಿಡ ಭಾಷೆಗಳಿಗೆ ಮನ್ನಣೆ ಸಿಗಬೇಕು. ಹಿಂದಿ ಹೇರಿಕೆ ಸಹಿಸುವುದಿಲ್ಲ ಎಂಬುದನ್ನು ಪ್ರತಿ ಬಾರಿಯು ಒಂದಲ್ಲ ಒಂದು ವೇದಿಕೆ ಮೂಲಕ ತಿಳಿಸುತ್ತಿದ್ದಾರೆ. ಇದನ್ನೇ ’ಜೈ ಭೀಮ್’ ಚಿತ್ರದಲ್ಲೂ ಅಳವಡಿಸಿದ್ದಾರೆ.

- Advertisement -

Join Whatsapp