ನಾಳೆ ಮಂಗಳೂರಿನಲ್ಲಿ ವಿದ್ಯುತ್ ವ್ಯತ್ಯಯ

Prasthutha|

- Advertisement -

ಮಂಗಳೂರು :  ಇದೇ ಸೆ.23ರ ಗುರುವಾರ ಬೆಳಿಗ್ಗೆ 10 ರಿಂದ ಸಂಜೆ 4 ಗಂಟೆಯವರೆಗೆ 220 ಕೆವಿ ಎಸ್.ಆರ್.ಎಸ್ ಕಾವೂರು ವಿದ್ಯುತ್ ಉಪಕೇಂದ್ರದಿಂದ ಹೊರಡುವ 11 ಕೆವಿ ಯೆಯ್ಯಾಡಿ, ವಾಮಂಜೂರು, ಹರಿಪದವು ಫೀಡರ್‍ಗಳ ತುರ್ತು ನಿರ್ವಹಣಾ ಕಾಮಗಾರಿ ಕೈಗೊಳ್ಳಲಾಗಿದೆ.

ಆದ ಕಾರಣ ಮೇರಿಹಿಲ್, ಯೆಯ್ಯಾಡಿ, ಹರಿಪದವು, ಕುಂಟಲ್ಪಾಡಿ, ಕೆ.ಪಿ.ಟಿ, ಉದಯನಗರ, ಲ್ಯಾಂಡ್ ಲಿಂಕ್ಸ್, ಪೆರ್ಲಗುರಿ, ಪದವಿನಂಗಡಿ, ಪಚ್ಚನಾಡಿ, ಕಾರ್ಮಿಕ ನಗರ, ಮಂಗಳ ಜ್ಯೋತಿ, ವಾಮಂಜೂರು ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ನಿಲುಗಡೆ ಮಾಡಲಾಗುತ್ತದೆ ಎಂದು ಮೆಸ್ಕಾಂ ಪ್ರಕಟಣೆ ತಿಳಿಸಿದ್ದಾರೆ.

Join Whatsapp