‘ಪಠಾಣ್’ ಸಿನಿಮಾ ಪ್ರಚಾರದ ಪೋಸ್ಟರ್ ಹರಿದು ಸಂಘಪರಿವಾರದಿಂದ ದಾಂಧಲೆ

Prasthutha|

ಅಹಮದಾಬಾದ್: ಬಾಲಿವುಡ್ ನಟ ಶಾರುಖ್ ಖಾನ್ ಹಾಗೂ ನಟಿ ದೀಪಿಕಾ ಪಡುಕೋಣೆ ಅಭಿನಯದ ‘ಪಠಾಣ್’ ಸಿನಿಮಾದ ಪ್ರಚಾರಕ್ಕೆ ಸಂಘಪರಿವಾರದ ಕಾರ್ಯಕರ್ತರು ವಿರೋಧ ವ್ಯಕ್ತಪಡಿಸಿ ದಾಂಧಲೆ ನಡೆಸಿದ್ದಾರೆ.

- Advertisement -


ಅಹಮದಾಬಾದ್’ನ ಕರ್ಣಾವತಿ ಪ್ರದೇಶದ ಮಾಲ್’ನಲ್ಲಿ ‘ಪಠಾಣ್’ ಚಿತ್ರದ ಪೋಸ್ಟರ್’ಗಳನ್ನು ಹರಿದು ಹಾಕಿದ ಸಂಘಪರಿವಾರದ ಕಾರ್ಯಕರ್ತರು ‘ಜೈ ಶ್ರೀರಾಮ್’ ಎಂದು ಘೋಷಣೆ ಕೂಗಿದ್ದಾರೆ.


ಪಠಾಣ್ ಚಿತ್ರ ಪ್ರದರ್ಶನಕ್ಕೆ ಗುಜರಾತ್’ನಲ್ಲಿ ನಾವು ಅವಕಾಶ ನೀಡುವುದಿಲ್ಲ. ಚಿತ್ರ ಬಿಡುಗಡೆ ವಿರುದ್ಧ ಇಂದಿನ ಪ್ರತಿಭಟನೆಯನ್ನು ಎಲ್ಲ ಥಿಯೇಟರ್ ಮಾಲಕರು ಎಚ್ಚರಿಕೆಯಾಗಿ ಪರಿಗಣಿಸಬೇಕು ಎಂದು ಗುಜರಾತ್ ವಿಎಚ್’ಪಿ ವಕ್ತಾರ ಹಿತೇಂದ್ರ ಸಿನ್ಹ ರಜಪೂತ್ ಹೇಳಿದ್ದಾರೆ.
ಈ ಸಿನಿಮಾ ಜ.25ರಂದು ಬಿಡುಗಡೆಯಾಗಲಿದೆ.

- Advertisement -

Join Whatsapp