ಸತ್ತ ದನದ ಚರ್ಮ ಹೊಂದುವುದು ಅಪರಾಧವಲ್ಲ : ಬಾಂಬೆ ಹೈಕೋರ್ಟ್ ಸ್ಪಷ್ಟನೆ

Prasthutha|

ಮುಂಬೈ : ಸತ್ತ ಪ್ರಾಣಿಗಳ ಚರ್ಮ ಹೊಂದಿರುವುದು ಮಹಾರಾಷ್ಟ್ರ ಪ್ರಾಣಿ ಸಂರಕ್ಷಣಾ ಕಾಯ್ದೆಯಡಿ ಅಪರಾಧವಲ್ಲ ಎಂದು ಬಾಂಬೆ ಹೈಕೋರ್ಟ್ ನಾಗ್ಪುರ ಪೀಠ ಸ್ಪಷ್ಟಪಡಿಸಿದೆ. ಈ ಕಾಯ್ದೆಯಡಿ ಗೋಹತ್ಯೆ ನಿಷೇಧಿಸಿದೆ ಮತ್ತು ಬೀಫ್ ಆಮದು ಮಾಡುವುದು, ರಫ್ತು ಮಾಡುವುದು ಮತ್ತು ಹೊಂದುವುದನ್ನು ನಿಷೇಧಿಸಿದೆ, ಆದರೆ ಸತ್ತ ಪ್ರಾಣಿಯ ಚರ್ಮ ಹೊಂದಿರುವುದನ್ನು ನಿಷೇಧಿಸಿಲ್ಲ ಎಂದು ಕೋರ್ಟ್ ತಿಳಿಸಿದೆ.

- Advertisement -

ಈ ಸಂಬಂಧ ಸರಕಾರ ಸುತ್ತೋಲೆ ಜಾರಿಗೊಳಿಸಿದ್ದರೂ, ಕಾನೂನಿನ ವಿಧಿಗಳ ಮುಂದೆ ಇಂತಹ ಸುತ್ತೋಲೆಗೆ ಮಾನ್ಯತೆಯಿಲ್ಲ ಎಂದು ನ್ಯಾ. ವಿಎಂ ದೇಶಪಾಂಡೆ ಮತ್ತು ನ್ಯಾ. ಅನಿಲ್ ಎಸ್. ಕಿಲೋರ್ ನ್ಯಾಯಪೀಠ ತಿಳಿಸಿದೆ.

ತನ್ನ ವಾಹನದಲ್ಲಿ ಸತ್ತ ದನಗಳ ಚರ್ಮ ಹೊಂದಿದ್ದುದಕ್ಕಾಗಿ ಎಫ್ ಐಆರ್ ದಾಖಲಿಸಲ್ಪಟ್ಟಿದ್ದ ಶಫೀಖುಲ್ಲಾ ಖಾನ್ ಎಂಬಾತ ಸಲ್ಲಿಸಿದ್ದ ಅರ್ಜಿಗೆ ಸಂಬಂಧಿಸಿ ಕೋರ್ಟ್ ಈ ತೀರ್ಪು ನೀಡಿದೆ. ತನ್ನ ವಿರುದ್ಧದ ಎಫ್ ಐಆರ್ ರದ್ದುಗೊಳಿಸುವಂತೆ ಶಫೀಖುಲ್ಲಾ ಖಾನ್ ಅರ್ಜಿಯಲ್ಲಿ ಮನವಿ ಮಾಡಿದ್ದ.  



Join Whatsapp