ಬೆಂಗಳೂರಿನ ಒಮಿಕ್ರೋನ್ ಸೋಂಕಿತ ವೈದ್ಯರ ಪತ್ನಿಗೂ ಪಾಸಿಟಿವ್: ರಸ್ತೆ ಸೀಲ್ ಡೌನ್

Prasthutha|

ಬೆಂಗಳೂರು: ಒಮಿಕ್ರೋನ್ ವೈರಸ್ ಪತ್ತೆಯಾಗಿದ್ದ ಬೆಂಗಳೂರಿನ ವೈದ್ಯ ಪತ್ನಿಗೆ ಶುಕ್ರವಾರ ಕೋವಿಡ್ ಪಾಸಿಟಿವ್ ದೃಢಪಟ್ಟಿದೆ. ಅವರ ಸ್ಯಾಂಪಲ್ ಅನ್ನು ಜಿನೋಮ್ ಸೀಕ್ವೆನ್ಸಿಂಗ್ ಗೆ ಕಳುಹಿಸಲಾಗಿದೆ.

- Advertisement -


ವೈದ್ಯರ ಪತ್ನಿಗೆ ಕೊರೋನಾ ಪಾಸಿಟಿವ್ ಕಂಡುಬಂದಿರುವ ಕಾರಣಕ್ಕೆ ಆರ್ ಬಿಐ ಲೇಔಟ್ ನ 100 ಮೀಟರ್ ರಸ್ತೆಯನ್ನು ಬಿಬಿಎಂಪಿ ಸೀಲ್ ಡೌನ್ ಮಾಡಿದೆ. ಬ್ಯಾರಿಕೇಡ್, ರೆಡ್ ಟೇಪ್ ಹಾಕಲಾಗಿದ್ದು ಸೋಂಕಿತ ವೈದ್ಯರ ಮನೆಗೆ ನಿರ್ಬಂಧಿತ ಪ್ರದೇಶ ಎಂದು ಸೂಚಿಸಲಾಗಿದೆ.


ಹಾಗೆಯೇ, ಹೆಚ್ಚಿನ ಸುರಕ್ಷತೆ ದೃಷ್ಟಿಯಿಂದ ಸೋಂಕಿತ ವ್ಯಕ್ತಿಯ ಅಕ್ಕಪಕ್ಕದ ಮನೆಯವರಿಗೆ ಕೋವಿಡ್ ಟೆಸ್ಟ್ ಮಾಡಲಾಗುತ್ತಿದೆ. ಇಲ್ಲಿಯವರೆಗೆ ಸುಮಾರು 32 ಜನರ ಸ್ಯಾಂಪಲ್ಸ್ ಅನ್ನು ಬಿಬಿಎಂಪಿ ಸಂಗ್ರಹಿಸಿದ್ದು, ಇಂದು ಎಲ್ಲರ ವರದಿ ಬರಲಿದೆ.



Join Whatsapp