ತಮಿಳಿನ ಖ್ಯಾತ ನಟ ಮನೋಬಾಲಾ ನಿಧನ

Prasthutha|

ಚೆನ್ನೈ: ತಮಿಳು ಚಿತ್ರರಂಗದ ಖ್ಯಾತ ನಿರ್ದೇಶಕ, ನಟ ಹಾಗೂ ಚಿತ್ರ ಕಥೆಗಾರ ಮನೋಬಾಲಾ ಅವರು ಬುಧವಾರ ನಿಧನರಾಗಿದ್ದಾರೆ.

- Advertisement -


ಅವರಿಗೆ 69 ವರ್ಷ ವಯಸ್ಸಾಗಿತ್ತು. ಕೆಲವು ತಿಂಗಳಿಂದ ಅವರು ಅನಾರೋಗ್ಯಕ್ಕೆ ಒಳಗಾಗಿದ್ದರು. ಲಿವರ್ ಸಂಬಂಧಿತ ಸಮಸ್ಯೆಯಿಂದ ಬಳಲುತ್ತಿದ್ದ ಮನೋಬಾಲ ಅವರು ಇಂದು (ಮೇ 3) ಕೊನೆಯುಸಿರು ಎಳೆದಿದ್ದಾರೆ.


ಮೂರೂವರೆ ದಶಕಕ್ಕೂ ಹೆಚ್ಚು ಕಾಲ ಬಣ್ಣದ ಲೋಕದಲ್ಲಿ ಮನೋಬಾಲ ಅವರು ಸಕ್ರಿಯರಾಗಿದ್ದರು. ಈ ಸುದೀರ್ಘ ಪಯಣದಲ್ಲಿ ಅವರು 450ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದರು. ಪ್ರತಿಭಾವಂತ ಕಲಾವಿದನನ್ನು ಕಳೆದುಕೊಂಡು ಕಾಲಿವುಡ್ ಬಡವಾಗಿದೆ. ಅವರ ನಿಧನಕ್ಕೆ ತಮಿಳು ಚಿತ್ರರಂಗದ ಅನೇಕರು ಕಂಬನಿ ಮಿಡಿದಿದ್ದಾರೆ.



Join Whatsapp