ಪಾಪ್ಯುಲರ್ ಫ್ರಂಟ್ ಬ್ಲಡ್ ಡೋನರ್ಸ್ ಫೋರಂ ಪಾಣೆಮಂಗಳೂರು ಹಾಗೂ ಯೇನಪೋಯ ಮೆಡಿಕಲ್ ಕಾಲೇಜು ಆಸ್ಪತ್ರೆ ಸಹಭಾಗಿತ್ವದಲ್ಲಿ ರಕ್ತದಾನ ಶಿಬಿರ; ಸಾಧಕರಿಗೆ ಸನ್ಮಾನ

Prasthutha|

- Advertisement -

ಬಂಟ್ವಾಳ: ಪಾಪ್ಯುಲರ್ ಫ್ರಂಟ್ ಬ್ಲಡ್ ಡೋನರ್ಸ್ ಫೋರಂ ಪಾಣೆಮಂಗಳೂರು ಹಾಗೂ ಯೇನಪೋಯ ಮೆಡಿಕಲ್ ಕಾಲೇಜು ಆಸ್ಪತ್ರೆ ಸಹಭಾಗಿತ್ವದಲ್ಲಿ ಮಾರ್ಚ್ 13 ರಂದು ದ.ಕ.ಜಿ.ಪಂ. ಹಿರಿಯ ಪ್ರಾಥಮಿಕ ಶಾಲೆ ನೆಹರು ನಗರದಲ್ಲಿ ಸಾರ್ವಜನಿಕ ರಕ್ತದಾನ ಶಿಬಿರ ನಡೆಯಿತು.

ಕಾರ್ಯಕ್ರಮದ ಸಭಾಧ್ಯಕ್ಷತೆಯನ್ನು ಪಾಪ್ಯುಲರ್ ಫ್ರಂಟ್ ಬ್ಲಡ್ ಡೋನರ್ಸ್ ಫೋರಂನ ಗೌರವಧ್ಯಕ್ಷರಾದ ಸಿ ಪಿ ಆದಂ ಹಾಜಿ ವಹಿಸಿದರು. ಉದ್ಘಾಟನೆ ಭಾಷಣವನ್ನು ಮಾಡಿದ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ದ.ಕ ಜಿಲ್ಲಾ ಅಧ್ಯಕ್ಷರಾದ ಇಜಾಝ್ ಅಹ್ಮದ್ ಅವರು ಪಾಪ್ಯುಲರ್ ಫ್ರಂಟ್ ಬ್ಲಡ್ ಡೋನರ್ಸ್ ಫೋರಂ ಕರ್ನಾಟಕ ರಾಜ್ಯಾದ್ಯಂತ ಕಾರ್ಯನಿರ್ವಸುತ್ತಿದ್ದು, ತುರ್ತು ಸೇವೆಗಳಿಗೆ ಸ್ಪಂದಿಸುತ್ತಾ ಬರುತ್ತಾ ಇದೆ, ಯುವಕರನ್ನು ಸಮಾಜಮುಖಿ ಕೆಲಸಗಳಿಗಾಗಿ ಪಾಪ್ಯುಲರ್ ಫ್ರಂಟ್ ಸಜ್ಜುಗೊಳಿಸುತ್ತಾ ಇದೆ, ಸಾರ್ವಜನಿಕರ ಸೇವೆಗೆ ಸದಾ ಸಿದ್ಧ ಇರುತ್ತದೆ ಎಂದು ಹೇಳಿದರು.

- Advertisement -

ಮುಖ್ಯ ಅತಿಥಿಯಾಗಿ ಭಾಗವಹಿಸಿ ಡಾ| ಫರ್ಹನ ರಕ್ತದಾನದ ಮಹತ್ವದ ಕುರಿತು ವಿವರಿಸಿದರು.

ಈ ಸಂದರ್ಭದಲ್ಲಿ ಪಾಪ್ಯುಲರ್ ಫ್ರಂಟ್ ಬಂಟ್ವಾಳ ತಾಲೂಕು ಅಧ್ಯಕ್ಷರಾದ ಸಲೀಂ ಕುಂಪನಮಜಲು ಅತಿಥಿ ಭಾಷಣ ಮಾಡಿದರು. ಎಸ್.ಡಿ.ಪಿ.ಐ ಬಂಟ್ವಾಳ ವಿಧಾನ ಸಭಾ ಕ್ಷೇತ್ರ ಸಮಿತಿ ಅಧ್ಯಕ್ಷರಾದ ಶಾಹುಲ್ ಎಸ್.ಎಚ್, ಅಬ್ದುಲ್ ಹಮೀದ್, ಮೊಹಮ್ಮದ್ ಸಲೀಂ, ಸುಲೈಮಾನ್, ನರಿಕೊಂಬು ಗ್ರಾಮ ಪಂಚಾಯತ್ ಸದಸ್ಯರಾದ ರಿಯಾಝ್, ಝುಬೈದ, ಮುಮ್ತಾಝ್ ಹಾಗೂ ಮತ್ತಿತರರು ಉಪಸ್ಥಿತರಿದ್ದರು ಹಾಗೂ ಸಾಮಾಜಿಕ ಹಾಗೂ ಕ್ರೀಡಾ ಕ್ಷೇತ್ರದಲ್ಲಿ ಸಾಧನೆಗೈದ ಸಾಧಕರಿಗೆ ಸನ್ಮಾನ ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮವನ್ನು ಕಬೀರ್ ರವರು ಸ್ವಾಗತಿಸಿ ಮುಸ್ತಫಾರವರು ನಿರೂಪಿಸಿದರು.

Join Whatsapp